ಕೂಡಿಗೆ, ಮಾ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಪುರಾತನ ಕಾಲದ ಆನೆ ಕೆರೆಗೆ ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗದೆ ಬೃಹತ್ ಕಾಲುವೆಯ ಮೂಲಕ ಹರಿಯುವ ಪರಿಣಾಮ ಆನೆಕರೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಕೆರೆಗೆ ಸಮೀಪದ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಸವನತ್ತೂರು ಗ್ರಾಮದ ಪ್ರಮುಖ ಕೆರೆಯಾಗಿರುವ ಆನೆಕೆರೆಯು ಸುತ್ತಮುತ್ತಲಿನ ಐದು ಗ್ರಾಮಗಳ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಮುಖ್ಯವಾದ ಕೆರೆಯಾಗಿದ್ದು, ಇದರಿಂದ ನೂರಾರು ರೈತರು ಜಮೀನಿನ ಕೊಳವೆ ಬಾವಿಗೆ ಅಂತರ್ಜಲ ದೊರಕುತಿತ್ತು. ಇದೀಗ ಕೆರೆಯಲ್ಲಿ ನೀರಿಲ್ಲದೆ ಈ ವ್ಯಾಪ್ತಿಯ ನೂರಾರು ಕೊಳವೆ ಬಾವಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಸಂಬAಧಿಸಿದ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.