ವೀರಾಜಪೇಟೆ, ಮಾ. ೧೯: ಹೆಗ್ಗಳ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಯೂ ಶೇ. ೯೩ ಫಲಿತಾಂಶದೊAದಿಗೆ ತೇರ್ಗಡೆ ಹೊಂದಿರುವ ಹಿನ್ನೆಲೆ ಈ ಫಲಿತಾಂಶಕ್ಕೆ ಕಾರಣಕರ್ತರಾದ ಶಾಲೆಯ ಸರ್ವ ಶಿಕ್ಷಕರನ್ನು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸನ್ಮಾನಿಸಿ ಗೌರವಿಸಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ದಿವಾಕರ್ ಹೆಚ್.ಎಲ್. ಶಿಕ್ಷಕರನ್ನು ಕುರಿತು ಮಾತನಾಡಿ, ದಲಿತ ಸಂಘರ್ಷ ಸಮಿತಿಯ ಮುಖ್ಯ ಗುರಿ ಕೊಡಗನ್ನು ಕರ್ನಾಟಕದ ಭೂಪಟದಲ್ಲಿ ಅಕ್ಷರಸ್ಥ ಜಿಲ್ಲೆಯನ್ನಾಗಿ ಮಾಡುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆಯ ಡಿವೈಎಸ್ಪಿ ಜಯಕುಮಾರ್ ಅವರು ಎಷ್ಟೊ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಕೊಡಲು ವಿಫಲರಾಗಿ ಮುಚ್ಚುತ್ತಿದ್ದು ಸರಕಾರಿ ಶಾಲೆಯಲ್ಲಿ ಶೇ. ೯೦ ಕ್ಕಿಂತಲೂ ಹೆಚ್ಚು ಅಂಕ ಗಳಿಸುತ್ತಿರುವ ಶಾಲೆಯ ಶಿಕ್ಷಕರುಗಳಿಗೆ ಸನ್ಮಾನಿಸುವುದು ಉತ್ತಮ ಕೆಲಸವೆಂದು ಅಭಿಪ್ರಾಯಪಟ್ಟರು. ಸಭಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪ್ಪಂಡ ಮಹೇಶ್ ಗಣಪತಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವು ದರೊಂದಿಗೆ ವಿವಿಧ ಕ್ಷೇತ್ರದಲ್ಲಿ ಹುದ್ದೆ ಪಡೆಯುವು ದರೊಂದಿಗೆ ದೇಶದ ಬೆಳವಣಿಗೆಗೆ ಕಾರಣವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ಪಾರ್ಲಿ ಅಬ್ರಹಾಂ ಮಾತನಾಡಿ, ಕುಗ್ರಾಮ ದಲ್ಲಿರುವ ಈ ಶಾಲೆಯ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಶಾಲಾ ಶಿಕ್ಷಕರಿಗೆ ಸಭೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಸನ್ಮಾನದ ನಂತರ ಸಭೆಯಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಡಾ. ಅಂಬೇಡ್ಕರ್, ವಿವೇಕಾನಂದ, ಮಹಾತ್ಮ ಗಾಂಧಿಯ ಅವರ ಜೀವನ ಚರಿತ್ರೆ ತಿಳಿದುಕೊಳ್ಳುವ ಮೂಲಕ ಅವರನ್ನು ಆದರ್ಶವಾಗಿಟ್ಟು ಕೊಳ್ಳಬೇಕೆಂದರು. ನಂತರ ಮಾತನಾಡಿದ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಎ.ಪಿ. ಅವರು ಶಿಕ್ಷಣ ಎಂತಹ ಬಡ ವ್ಯಕ್ತಿಯನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ತಾಲೂಕು ಸಂಚಾಲಕ ಸತೀಶ್ ವಂದಿಸಿದರು. ಈ ಸಂದರ್ಭ ವೇದಿಕೆ ಯಲ್ಲಿ ಶಿಕ್ಷಕ ಸುನೀತ, ಕೆನರಾ ಬ್ಯಾಂಕ್ ನೌಕರ ಜಾರ್ಜ್, ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಲಿತ ವಿದ್ಯಾರ್ಥಿ ಸಂಘದ ಸದಸ್ಯೆ ಭವಾನಿ ಸ್ವಾಗತಿಸಿದರೆ, ನಿರೂಪಣೆಯನ್ನು ಶಿಕ್ಷಕಿ ಸರಸ್ವತಿ ನೆರವೇರಿಸಿದರು.