ವೀರಾಜಪೇಟೆ, ಮಾ. ೨೦: ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಕಾಲ್ಚೆಂಡು ಪಂದ್ಯಾಟಗಳು ಏಪ್ರಿಲ್ ೧೭ ಮತ್ತು ೧೮ ರಂದು ಜರುಗಲಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೀರಾಜಪೇಟೆ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಗಸ್ಟೀನ್ ಕ್ಷೇವಿಯರ್ ಅವರು ಸಂಘದ ೯ನೇ ವಾರ್ಷಿಕೋತ್ಸವದ ಪ್ರಯುಕ್ತ ೨ನೇ ವರ್ಷದ ರೋಮನ್ ಕ್ಯಾಥೋಲಿಕ್ ಜಿಲ್ಲಾ ಮಟ್ಟದ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವನ್ನು ೨೦೨೧ರ ಏಪ್ರಿಲ್ ೧೭ ಮತ್ತು ೧೮ ರಂದು ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದೆ. ಸಂಘವು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಕ್ರೀಡೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏಪ್ರಿಲ್ ೧೭ ಮತ್ತು ೧೮ ರಂದು ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದÀರ್ಶಿ ಜ್ಯೂಡಿ ವಾಜ್ ಅವರು ಮಾತನಾಡಿ, ಎರಡನೇ ವರ್ಷದ ರೋಮನ್ ಕ್ಯಾಥೋಲಿಕ್ ಜಿಲ್ಲಾ ಮಟ್ಟದ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟದಲ್ಲಿ ಒಂದು ಧರ್ಮ ಕೇಂದ್ರದಿAದ (ವಿಚಾರಣೆ) ನಾಲ್ಕು ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ನೀಡಲಾಗುತ್ತದೆ.
ಧರ್ಮಕೇಂದ್ರದ ಕ್ರೆöÊಸ್ತ ಬಾಂಧವರು ಹಾಗೂ ಜಿಲ್ಲಾದÀ್ಯಂತ ಕ್ರೆöÊಸ್ತ ಬಾಂಧವರು ಮತ್ತು ಕ್ರೀಡಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕಾರ ನೀಡಿ ಪಂದ್ಯಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ತಂಡಗಳ ನೋಂದಾಯಿಸಲು ಏಪ್ರಿಲ್ ೫ ಕೊನೆಯ ದಿನವಾಗಿರುತ್ತದೆ. ತಂಡಗಳ ನೋಂದಾವಣೆಗಾಗಿ ಮೊಬೈಲ್ ಸಂಖ್ಯೆ ೯೮೪೪೫೫೮೫೩೫, ೮೬೧೮೦೮೯೩೪೮, ೯೪೮೩೮೩೫೫೧೯, ೭೮೯೨೨೭೫೩೭೦ ಮತ್ತು ೯೪೪೯೯೫೨೬೦೯ಗಳಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿಷನ್ ವಾಜ್, ಕ್ರೀಡಾ ಕಾರ್ಯದÀರ್ಶಿ ಜೋಸ್ ನಿಶಾಂತ್, ಸಹಕಾರ್ಯದರ್ಶಿ ರಿಯಾನ್ ಲೋಬೊ, ಸಾಂಸ್ಕೃತಿಕ ಕಾರ್ಯದರ್ಶಿ ದಿಲೀಪ್ ಪಿಂಟೋ ಹಾಜರಿದ್ದರು.