
ನಾಪೋಕ್ಲು, ಮಾ. ೨೦: ಕಾಫಿ ತೋಟವೊಂದರಲ್ಲಿ ಕಾರ್ಮಿಕನಿಗೆ ಎರಡು ಹುಲಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾದ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪತ್ತಂಗೋಟ್ ಮೂಸ ಎಂಬವರ ಕಾಫಿ ತೋಟಕ್ಕೆ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಕಾಫಿ ಗಿಡ ಕಸಿ ಕೆಲಸ ನಿರ್ವಹಿಸಲು ಅದೇ ಗ್ರಾಮದ ಪುದುರೆ ಅಬೂಬಕ್ಕರ್ ಎಂಬವರು ತೆರಳಿದ್ದರು. ಕಾಫಿ ನಾಪೋಕ್ಲು, ಮಾ. ೨೦: ಕಾಫಿ ತೋಟವೊಂದರಲ್ಲಿ ಕಾರ್ಮಿಕನಿಗೆ ಎರಡು ಹುಲಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾದ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪತ್ತಂಗೋಟ್ ಮೂಸ ಎಂಬವರ ಕಾಫಿ ತೋಟಕ್ಕೆ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಕಾಫಿ ಗಿಡ ಕಸಿ ಕೆಲಸ ನಿರ್ವಹಿಸಲು ಅದೇ ಗ್ರಾಮದ ಪುದುರೆ ಅಬೂಬಕ್ಕರ್ ಎಂಬವರು ತೆರಳಿದ್ದರು. ಕಾಫಿ ಹುಲಿಗಳು ಮಲಗಿರುವದು ಕಂಡು ಬಂದಿದೆ. ಹುಲಿಗಳು ಬೆನ್ನುಹಾಕಿ ಮಲಗಿದ್ದ ಕಾರಣ ಹುಲಿಗಳಿಗೆ ಈತನ ಬರುವಿಕೆ ಗೋಚರಿಸಲಿಲ್ಲ. ತಕ್ಷಣ ಅಬೂಬಕ್ಕರ್ ಅಲ್ಲಿಂದ ಹಿಂದಿರುಗಿ ತಮ್ಮ ಯಜಮಾನನಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ರಕ್ಷಕರಾದ ಕಾಳೇಗೌಡ, ಸೋಮಣ್ಣಗೌಡರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ತೆರಳಿ ಹುಲಿಯ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ, ಯಾವದೇ ಗುರುತು ಪತ್ತೆಯಾಗಿಲ್ಲ. ಭೂಮಿ ಒಣಗಿರುವ
(ಮೊದಲ ಪುಟದಿಂದ) ಕಾರಣ ಹೆಜ್ಜೆ ಗುರುತು ಕೂಡ ಕಂಡು ಬಂದಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಸ್ಥಳ ಕೊಳಕೇರಿ ಮತ್ತು ಕೋಕೇರಿ ಗ್ರಾಮದಂಚಿನಲ್ಲಿದ್ದು, ಹುಲಿಗಳು ಎತ್ತ ಹೋಗಿವೆ ಎನ್ನುವದು ತಿಳಿಯದಾಗಿದೆ. ಒಂದು ವಾರಗಳಿಂದ ಕುಂಜಿಲ ಗ್ರಾಮದ ಸುತ್ತಮುತ್ತ ಹುಲಿ ಗೋವುಗಳನ್ನು ಕೊಲ್ಲುತ್ತಿರುವದರಿಂದ ಈ ವ್ಯಾಪ್ತಿಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಜನ ಮತ್ತು ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸುವಾಗ ಜಾಗರೂಕತೆಯಿಂದಿರಬೇಕು. ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿಯುವ ಕೆಲಸವನ್ನು ಕೂಡಲೇ ಕೈಗೊಳ್ಳ ಬೇಕೆಂದು ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಆಗ್ರಹಿಸಿದ್ದಾರೆ. -ಪಿ.ವಿ. ಪ್ರಭಾಕರ್ಕುಂಜಿಲದಲ್ಲಿ ಹುಲಿ ಪ್ರತ್ಯಕ್ಷ ; ಬೆದರಿದ ಜನತೆ