ಮಡಿಕೇರಿ, ಮಾ.೧೮ : ಮಡಿಕೇರಿ ನಗರದಲ್ಲಿ ಮಹಾತ್ಮಗಾಂಧಿ ಸ್ಮಾರಕ ನಿರ್ಮಾಣಕ್ಕೆ ೧ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಮಿತಿಯ ನಿಯೋಗ ದೇಶದಲ್ಲೇ ಅಪರೂಪ ಎಂಬAತೆ ಮಡಿಕೇರಿಯಲ್ಲಿ ಮಹಾತ್ಮಗಾಂಧಿ ಅವರ ಚಿತಾಭಸ್ಮ ವಿದ್ದು, ಇದಕ್ಕೆ ಗೌರವದ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿತು.
ನಗರದ ಗಾಂಧಿ ಮೈದಾನ ದಲ್ಲಿರುವ ಗಾಂಧಿ ಮಂಟಪದ ಪ್ರದೇಶದಲ್ಲಿ ಸುಸಜ್ಜಿತವಾದ ಸ್ಮಾರಕ ಭವನ ನಿರ್ಮಾಣಕ್ಕೆ ದಶಕದ ಹಿಂದೆಯೇ ಯೋಜನೆ ರೂಪಿಸ ಲಾಗಿತ್ತು. ಆದರೆ ಅನುದಾನ ದೊರಕದ ಕಾರಣ ಭವನ ನಿರ್ಮಾಣ ಅಪರೂಪ ಎಂಬAತೆ ಮಡಿಕೇರಿಯಲ್ಲಿ ಮಹಾತ್ಮಗಾಂಧಿ ಅವರ ಚಿತಾಭಸ್ಮ ವಿದ್ದು, ಇದಕ್ಕೆ ಗೌರವದ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿತು.
ನಗರದ ಗಾಂಧಿ ಮೈದಾನ ದಲ್ಲಿರುವ ಗಾಂಧಿ ಮಂಟಪದ ಪ್ರದೇಶದಲ್ಲಿ ಸುಸಜ್ಜಿತವಾದ ಸ್ಮಾರಕ ಭವನ ನಿರ್ಮಾಣಕ್ಕೆ ದಶಕದ ಹಿಂದೆಯೇ ಯೋಜನೆ ರೂಪಿಸ ಲಾಗಿತ್ತು. ಆದರೆ ಅನುದಾನ ದೊರಕದ ಕಾರಣ ಭವನ ನಿರ್ಮಾಣ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಆದ್ದರಿಂದ ತಕ್ಷಣ ೧ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಪ್ರಮುಖರು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿರುವ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ ಅವರು ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಪೂರಕ ರೀತಿಯಲ್ಲಿ ಸ್ಪಂದಿಸಿದ್ದು, ೧ ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ನಿಯೋಗ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು. ಸರ್ವೋದಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಕೋಶಾಧಿಕಾರಿ ಕೋಡಿ ಚಂದ್ರಶೇಖರ್, ಕಾರ್ಯದರ್ಶಿ ಬೇಬಿ ಮ್ಯಾಥ್ಯು, ಪ್ರಮುಖರಾದ ನವೀನ್ ಅಂಬೇಕಲ್ ಮತ್ತಿತರರು ನಿಯೋಗದಲ್ಲಿದ್ದರು.