ಮಡಿಕೇರಿ, ಮಾ. ೧೮: ಜೀವಮಾನ ಸಾಧನೆಗೆ ಲುದಿಯಾನದ ಎಡುನೇಷನ್ ವಾಹಿನಿ ನೀಡುವ ಗ್ಲೋಬಲ್ ಸ್ಕೂಲ್ ಅವಾರ್ಡ್ಗೆ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯ ಕಲಾಶಿಕ್ಷಕ ಸದಾನಂದ ಪುರೋಹಿತ್ ಭಾಜನರಾಗಿದ್ದಾರೆ. ಕಲಾ ಸೇವೆಯಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.