ಮಡಿಕೇರಿ, ಮಾ. ೧೮: ಇಡೀ ವಿಶ್ವದಲ್ಲಿ ಕೊರೊನಾ ವೈರಸ್ ತನ್ನ ರೌದ್ರ ನರ್ತನವನ್ನು ಪ್ರದರ್ಶಿಸುತ್ತಿದ್ದ ಸಂದರ್ಭ ಬರೀ ಟಿವಿ, ಪತ್ರಿಕೆ, ಸಾಮಾಜಿಕ ಜಾಲಣದಲ್ಲಿ ಕೊರೊನಾ ವೈರಸ್ ಬಗ್ಗೆ ಕೇಳುತ್ತಿದ್ದ ಕೊಡಗಿನ ಜನತೆಗೆ ೨೦೨೦ ಮಾರ್ಚ್ ೧೯ ರಂದು ಬಹುದೊಡ್ಡ ಆಘಾತ ಉಂಟಾಯಿತು.
ಯಾಕೆAದರೆ ಬೆಳಿಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮಂತ್ರಿ ಶ್ರೀರಾಮುಲು, ತಮ್ಮ ಟ್ವಿಟರ್ ಖಾತೆಯಲ್ಲಿ, ದುಬೈನಿಂದ ಆಗಮಿಸಿದ್ದ ಕೊಡಗಿನ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಓದಿದ ಜಿಲ್ಲೆಯ ಜನತೆ ಭಯಭೀತರಾಗಿದರು. ಸುದ್ದಿ ಕೇಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು, ಈ ಸುದ್ದಿ ಸುಳ್ಳು, ಸತ್ಯ ಎಂಬ ಚರ್ಚೆ ಪ್ರಾರಂಭಿಸಿದರು.
ಮಾರ್ಚ್ ೧೯ ರಂದು ಮಧ್ಯಾಹ್ನ ಸಮಯ ಅಂದಿನ ಕೊಡಗಿನ ಜಿಲ್ಲಾಧಿಕಾರಿಯಾಗಿದ್ದ ಅನೀಸ್ ಕಣ್ಮಣಿ ಜಾಯ್ ಸುದ್ದಿಗೋಷ್ಠಿ ನಡೆಸಿ, ದುಬೈನಿಂದ ಜಿಲ್ಲೆಗೆ ಆಗಮಿಸಿದ್ದ ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿಯ ಕೊಂಡAಗೇರಿ ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿ, ೧೪೪\೩ ಘೋಷಿಸಿ ಹಲವು ನಿರ್ಬಂಧಗಳನ್ನು ಜಿಲ್ಲಾಡಳಿತ ವಿಧಿಸಿತು. ೨೨ ದಿನಗಳ ಕಾಲ ಮನೆಯಲ್ಲೇ ಕೊಂಡAಗೇರಿ ಜನತೆ ಕಾಲ ಕಳೆಯುವಂತಾಯಿತು.
ಒAದೆಡೆ ಜಿಲ್ಲೆಯ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಹೆಚ್ಚಾಗಿ ಮಾಹಿತಿ ಇರಲಿಲ್ಲ. ಸೋಂಕು ಪತ್ತೆಯಾಗಿದ್ದ ಕೊಂಡAಗೇರಿ ಜನತೆ ಅಕ್ಷರಶಃ ಭಯಭೀತರಾಗಿದ್ದರು.
ಸೋಂಕು ದೃಢಪಟ್ಟಿದ್ದ ವ್ಯಕ್ತಿ ವಾಸವಿರುವ ಕೇತುಮೊಟ್ಟೆಯ ೭೫ ಮನೆಯನ್ನು ಕಂಟೈನ್ಮೆAಟ್ ಝೋನ್ ಹಾಗೂ ಕೊಂಡAಗೇರಿಯನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿತು. ಕೊಂಡAಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.
ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ವಾಸ ಸ್ಥಳದ ೭೫ ಮನೆಗಳಿಗೆ ಜಿಲ್ಲಾಡಳಿತ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುವ ಕಾರ್ಯ ಕೈಗೊಂಡಿತು.
ಏಪ್ರಿಲ್ ೭ ರಂದು ಡಿಸ್ಚಾರ್ಜ್
ಮಾರ್ಚ್ ೧೯ ರಂದು ಕೊರೊನಾ ಸೋಂಕು ದೃಢಪಟ್ಟಿದ್ದ ವ್ಯಕ್ತಿಗೆ ಕೊಡಗು ಜಿಲ್ಲಾಡಳಿತ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿತು. ೨೦ ದಿನಗಳ ಸತತ ಚಿಕಿತ್ಸೆಯ ನಂತರ ಸೋಂಕು ದೃಢಪಟ್ಟಿದ್ದ ವ್ಯಕ್ತಿಯು ಗುಣಮುಖರಾದರು.
ಕೊರೊನಾ ಸೋಂಕು ಪತ್ತೆಯಾಗಿ ಆಘಾತಕ್ಕೆ ಒಳಗಾಗಿದ್ದ ಕೊಡಗಿನ ಜನತೆ ಕೊಂಚ ನಿಟ್ಟುಸಿರು ಬಿಡುವಂತಾಯಿತು.
ಏಪ್ರಿಲ್ ೭ರ ನಂತರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗದೆ ಹಸಿರು ವಲಯದಲ್ಲಿ ಸ್ಥಾನ ಪಡೆದಿತ್ತು. ಸರ್ಕಾರ ಹೊರಡಿಸುವ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ, ಸೋಂಕು ಹರಡದೆ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಂಡಿದಕ್ಕೆ ಇಡೀ ದೇಶದಲ್ಲಿ ಉತ್ತಮ ಹೆಸರುಗಳಿಸಿತು.
ಜುಲೈ ೫ ರಂದು ಸೋಂಕಿನಿAದ ಮೊದಲ ಸಾವು
ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಸೋಂಕಿನಿAದ ೮೨ ಮಂದಿ ಸಾವಿಗೀಡಾಗಿದ್ದಾರೆ. ಜುಲೈ ೫ ರಂದು ಕುಶಾಲನಗರದ ೫೮ ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿAದ ಮೃತಪಟ್ಟರು. ಲಾಕ್ಡೌನ್ ತೆರವಾದ ಬಳಿಕ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆಗಳು ಹೆಚ್ಚಾಗುತ್ತಾ ಬಂದಿತು. ಅಲ್ಲದೇ ಪ್ರವಾಸಿ ತಾಣಗಳಲ್ಲಿ ಜನರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೆ ಗುಂಪು ಗೂಡುತ್ತಿದ್ದರು. ಜಿಲ್ಲಾಧಿಕಾರಿ ಎಲ್ಲಾ ಪ್ರವಾಸಿ ತಾಣವಾಗಳನ್ನು ಬಂದ್ ಮಾಡಿ ಆದೇಶ ನೀಡಿದರು.
ಲಾಕ್ಡೌನ್ನಿಂದ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ದವಾಗಿತ್ತು. ಕೆಲವೊಂದು ಹೋಂಸ್ಟೇಗಳು ಮಾರ್ಚ್ ತಿಂಗಳಲ್ಲಿ ಬಂದ್ ಮಾಡಲಾಗಿತ್ತು. ಕೊರೊನಾ ಸೋಂಕು, ಲಾಕ್ಡೌನ್ನಿಂದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬಂದ್ ಮಾಡಲಾಗಿತ್ತು.
ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿದೆ
ಪ್ರತೀ ದಿನ ಹತ್ತಕ್ಕಿಂತ ಕಡಿಮೆ ಜನರಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿದೆ. ಇದೀಗ ಲಸಿಕಾ ಅಭಿಯಾನವು ಸುಸೂತ್ರವಾಗಿ ನಡೆಯುತ್ತಿದ್ದು, ಸೋಂಕಿನ ಸಂಪೂರ್ಣ ನಿರ್ಮೂಲನೆಯತ್ತ ದೇಶದ ಗುರಿಗೆ ಜಿಲ್ಲೆಯೂ ಸಾಥ್ ನೀಡಿದೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆ