ಬೆಂಗಳೂರು, ಕಲಬುರಗಿ, ಬೀದರ್‌ನಲ್ಲಿ ಕೊರೊನಾ ನಿಯಂತ್ರಿಸಲು ಪ್ರಧಾನಿ ಸೂಚನೆ

ಬೆಂಗಳೂರು, ಮಾ. ೧೭: ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕುರಿತಂತೆ ಬೆಂಗಳೂರು, ಕಲಬುರಗಿ ಮತ್ತು ಬೀದರ್‌ನಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು ಈ ಬಗ್ಗೆ ಹೆಚ್ಚು ಗಮನಹರಿಸುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ದೇಶದ ಕೊರೊನಾ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿಗಳೊAದಿಗೆ ವೀಡಿಯೋ ಸಮಾವೇಶದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಲಾಕ್‌ಡೌನ್ ಮತ್ತು ಕರ್ಫ್ಯೂ ಜಾರಿ ಮಾಡಲ್ಲ, ಹೀಗಾಗಿ ಜನರು ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಹಾರಾಷ್ಟçದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಹಾ ಗಡಿಯನ್ನು ಹೊಂದಿರುವ ಕಲಬುರಗಿ, ಬೀದರ್ ಮತ್ತು ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಈ ಮೂರು ಜಿಲ್ಲೆಗಳತ್ತ ಹೆಚ್ಚು ಗಮನ ಹರಿಸಲು ಮೋದಿ ಅವರು ನಮ್ಮನ್ನು ಕೇಳಿಕೊಂಡರು ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು. ಇದೇ ವೇಳೆ ರಾಜ್ಯದಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿರುವುದರಿAದ ಭಯಪಡುವ ಅಗತ್ಯವಿಲ್ಲ. ಯಾವುದೇ ಕರ್ಫ್ಯೂ ಅಥವಾ ರಾತ್ರಿ ಕರ್ಫ್ಯೂ ಜಾರಿಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವಂತೆ ಮನವಿ ಮಾಡಿದರು.

ಮಹಿಳಾಪರ ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಕೋಲ್ಕತಾ, ಮಾ. ೧೭: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಆಡಳಿತರೂಢ ಟಿಎಂಸಿ ಬುಧವಾರ ಮಹಿಳಾ ಪರವಾದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ನಮ್ಮ ಸರ್ಕಾರ ರಾಜ್ಯದಲ್ಲಿ ಬಡತನದ ಪ್ರಮಾಣವನ್ನು ಶೇ. ೪೦ರಷ್ಟು ಕಡಿಮೆ ಮಾಡಿದೆ ಎಂದು ಹೇಳಿದರು. ಪ್ರಣಾಳಿಕೆಯಲ್ಲಿ ವರ್ಷಕ್ಕೆ ಐದು ಲಕ್ಷ ಉದ್ಯೋಗ ಸೃಷ್ಟಿ, ಬಂಗಾಳದಲ್ಲಿ ಸಾಮಾನ್ಯ ವರ್ಗ ಮತ್ತು ಹಿಂದುಳಿದ ಸಮುದಾಯದ ಕನಿಷ್ಟ ವಾರ್ಷಿಕ ಆದಾಯವನ್ನು ರೂ. ೬,೦೦೦ ಮತ್ತು ೧೨,೦೦೦ ರೂ.ಗೆ ಏರಿಕೆ, ೧೮ ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ತಿಂಗಳಿಗೆ ರೂ. ೧೦೦೦ ಪಿಂಚಣಿ ಹಾಗೂ ೧.೬ ಕೋಟಿ ಮನೆಗಳಲ್ಲಿ ಮಹಿಳೆಯರ ಮೂಲ ಮಾಸಿಕ ಆದಾಯವನ್ನು ನಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಸಿಎಂ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಬಂಗಾಳದ ಪ್ರತಿ ಕುಟುಂಬಕ್ಕೂ ಕನಿಷ್ಟ ಮೂಲ ಆದಾಯವನ್ನು ವಿಸ್ತರಿಸಲಾಗುವುದು. ಇದರ ಅಡಿಯಲ್ಲಿ ೧.೬ ಕೋಟಿ ಸಾಮಾನ್ಯ ವರ್ಗದ ಕುಟುಂಬಗಳಿಗೆ ತಿಂಗಳಿಗೆ ರೂ. ೫೦೦, ಎಸ್‌ಸಿ-ಎಸ್‌ಟಿ ವರ್ಗದ ಕುಟುಂಬಗಳಿಗೆ ರೂ. ೧,೦೦೦ ನೀಡಲಾಗುವುದು ಮತ್ತು ಈ ಹಣವನ್ನು ನೇರವಾಗಿ ಅವರ ಖಾತೆಗೆಳಿಗೆ ವರ್ಗಾಯಿಸಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದರು.

ಎಲ್ಲಾ ದೇಶೀಯ ಟೂರ್ನಿಗಳನ್ನು ಸ್ಥಗಿತಗೊಳಿಸಿದ ಬಿಸಿಸಿಐ

ನವದೆಹಲಿ, ಮಾ. ೧೭: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ವಿನೂ ಮಂಕಡ್ ಟ್ರೋಫಿ ಸೇರಿದಂತೆ ಎಲ್ಲಾ ದೇಶೀಯ ಟೂರ್ನಿಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಯ್ ಶಾ ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಪತ್ರದ ಮೂಲಕ ಈ ಬೆಳವಣಿಗೆಯ ಬಗ್ಗೆ ತಿಳಿಸಿದ್ದು, ಪ್ರಸ್ತುತ ಸನ್ನಿವೇಶದಲ್ಲಿ, ಈ ಟೂರ್ನಿಗಳನ್ನು ಆಯೋಜಿಸುವುದರಿಂದ ಹೆಚ್ಚುವರಿ ಮುತುವರ್ಜಿ ತೆಗೆದುಕೊಳ್ಳಬೇಕಾಗುವುದು ಎಂದಿದ್ದಾರೆ. ಇಷ್ಟೇ ಅಲ್ಲದೆ ಐಪಿಎಲ್ ಟೂರ್ನಿಯ ಆಯೋಜನೆ ನಂತರ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳು ಜನವರಿಯಲ್ಲಿ ದೇಶೀಯ ಕ್ರಿಕೆಟ್ ಸರಣಿಯಲ್ಲಿ ನಡೆದಿದ್ದವು. ಪ್ರಸ್ತುತ, ಹಿರಿಯ ಮಹಿಳಾ ಏಕದಿನ ಟ್ರೋಫಿ ನಡೆಯುತ್ತಿದ್ದಾಗ ಅಂರ‍್ರಾಷ್ಟಿçÃಯ ಕ್ರಿಕೆಟ್ ಸಹ ಯಶಸ್ವಿಯಾಗಿ ಆಯೋಜನೆಯಾಗುತ್ತಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಉಲ್ಬಣದ ಬಳಿಕ ಭಾರತ ಪ್ರವಾಸ ಮಾಡಿದ ಮೊದಲ ದೇಶ ಇಂಗ್ಲೆAಡ್ ಆಗಿದೆ. ಏತನ್ಮಧ್ಯೆ, ಅಹಮದಾಬಾದ್‌ನಲ್ಲಿ ಭಾರತ ಮತ್ತು ಇಂಗ್ಲೆAಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ-೨೦ ಸರಣಿಯ ಉಳಿದ ಪಂದ್ಯಗಳಲ್ಲಿ ಸಾರ್ವಜನಿಕರು ಪಂದ್ಯ ವೀಕ್ಷಣೆಗೆ ಆಗಮಿಸುವುದನ್ನು ಬಿಸಿಸಿಐ ನಿರ್ಬಂಧಿಸಿದೆ.

ಮಾಜಿ ಸಚಿವ ದಿಲೀಪ್ ಗಾಂಧಿ ಸಾವು

ನವದೆಹಲಿ, ಮಾ. ೧೭: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ದಿಲೀಪ್ ಕುಮಾರ್ ಗಾಂಧಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್-೧೯ ಪಾಸಿಟಿವ್ ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬುಧವಾರ ಬೆಳಿಗ್ಗೆ ದಿಲೀಪ್ ಗಾಂಧಿ ಸಾವನ್ನಪ್ಪಿದ್ದಾರೆ. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಅಹಮದಾನಗರ್ ಲೋಕಸಭಾ ಕ್ಷೇತ್ರದಿಂದ ದಿಲೀಪ್ ಕುಮಾರ್ ಮೂರು ಬಾರಿ ಆಯ್ಕೆಯಾಗಿದ್ದರು. ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.

ವಿಮಾನದಲ್ಲಿ ಮಾಸ್ಕ್ ಧರಿಸದೇ ಇದ್ದ ನಾಲ್ವರ ವಿರುದ್ಧ ಕೇಸ್!

ನವದೆಹಲಿ, ಮಾ. ೧೭: ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸುವಂತೆ ಮನವಿ ಮಾಡಿದ ಹೊರತಾಗಿಯೂ ಮೊಂಡುತನ ಪ್ರದರ್ಶಿಸಿ ನಿಯಮಗಳನ್ನು ಉಲ್ಲಂಘಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋವಿಡ್-೧೯ ನಿಯಮ ಉಲ್ಲಂಘನೆ ಪ್ರಕರಣವನ್ನು ಈ ನಾಲ್ವರ ವಿರುದ್ಧ ದಾಖಲಿಸಲಾಗಿದೆ. ಇದೇ ಮೊದಲ ಬಾರಿಗೆ ಕೋವಿಡ್-೧೯ ನಿಯಮ ಉಲ್ಲಂಘನೆಯಡಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಮ್ಮು-ದೆಹಲಿ ನಡುವೆ ಸಂಚರಿಸುತ್ತಿದ್ದ ಅಲೈಯನ್ಸ್ ಏರ್ ಫ್ಲೆöÊಟ್‌ನಲ್ಲಿದ್ದ ನಾಲ್ವರಿಗೆ ಪೈಲಟ್‌ಗಳು ಕ್ಯಾಬಿನ್ ಸಿಬ್ಬಂದಿಗಳೂ ಸೇರಿದಂತೆ ಹಲವರು ಮಾಸ್ಕ್ ಧರಿಸಲು ಮನವಿ ಮಾಡಿದ್ದರಾದರೂ ಮೊಂಡುತನ ಪ್ರದರ್ಶಿಸಿ ಮಾಸ್ಕ್ ಧರಿಸದೇ ಕುಳಿತಿದ್ದರು. ದೆಹಲಿಗೆ ವಿಮಾನ ಆಗಮಿಸುತ್ತಿದ್ದಂತೆಯೇ ಅವರನ್ನು ಭದ್ರತಾ ಸಂಸ್ಥೆಗಳ ವಶಕ್ಕೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದ್ದರ ಪರಿಣಾಮವಾಗಿ ನಾಲ್ವರಿಗೂ ಒಂದಷ್ಟು ಕಾಲ ಅಲೈಯನ್ಸ್ ಏರ್ ಫ್ಲೆöÊಟ್‌ನಲ್ಲಿ ಸಂಚರಿಸುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

ಮನೆ ಬಾಗಿಲಿಗೆ ಬರಲಿದೆ ಕೋವಿಡ್ ಲಸಿಕೆ

ಬೆಂಗಳೂರು, ಮಾ. ೧೭: ರಾಜ್ಯದ ಏಳು ಜಿಲ್ಲೆಗಳ ದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಪರೀಕ್ಷಾ ಕೇಂದ್ರಗಳ ಮಾದರಿಯಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ರೀತಿಯ ಕ್ರಮವು ಸಹಾಯ ಮಾಡುತ್ತದೆ ಎಂದು ಇತ್ತೀಚಿಗೆ ನಡೆದ ಕೋವಿಡ್ ಸಲಹಾ ಸಮಿತಿಯು ಈ ಸಲಹೆಯನ್ನು ನೀಡಿದೆ. ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಲಸಿಕಾ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ, ಅಲ್ಲಿ ನಾವು ಲಸಿಕೆಗಳ ಮೇಲ್ವಿಚಾರಣೆ ಮತ್ತು ಸಂಗ್ರಹಣೆಗಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ವ್ಯಾನ್ಗಳನ್ನು ಹೊಂದಬಹುದು ಹಾಗೂ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲು ಸಹಯವಾಗುತ್ತದೆ ಎಂದು ಸಲಹಾ ಸಮಿತಿ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ತಜ್ಞರ ಪ್ರಕಾರ, ಅಂತಹ ಕೇಂದ್ರವನ್ನು ಸ್ಥಾಪಿಸುವ ಲಾಜಿಸ್ಟಿಕ್ಸ್ ಅನ್ನು ರೂಪಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚಿನ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಮೊಬೈಲ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲು ಅಧಿಕ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಿರಿಯ ನಾಗರಿಕರು ಆಸ್ಪತ್ರೆಗಳಿಗೆ ಕರೆತರಲು ಬೇರೊಬ್ಬರನ್ನು ಅವಲಂಬಿಸಬೇಕಾಗಿಲ್ಲವಾದ್ದರಿAದ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುವುದರಿಂದ ಅವರಿಗೆ ಸಹಾಯವಾಗುತ್ತದೆ. ಸೌಲಭ್ಯಗಳು ಹಾಗೂ ಫಲಾನುಭವಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಬಹುದು. ಆ್ಯಂಬುಲೆನ್ಸ್ಗಳಿAದ ತುರ್ತಾಗಿ ಆಸ್ಪತ್ರೆಗೆ ದಾಖಲಿಸಬಹುದಾಗಿದೆ ಎಂದು ಕಮಿಟಿಯ ಮತ್ತೊಬ್ಬ ಸದಸ್ಯ ಹೇಳಿದ್ದಾರೆ.