ಮಡಿಕೇರಿ, ಮಾ. ೧೭: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಯಲಹಂಕದ ಚಿಗುರು ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ ಶ್ರೀದೇವಿ ಕಲಾ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈಕೆ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ೫ನೇ ತರಗತಿಯ ವಿದ್ಯಾರ್ಥಿನಿ. ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಆಚಾರ್ಯ ಶಿಷ್ಯೆಯಾಗಿದ್ದು ಮುರುಗೇಶ ಹಾಗೂ ತುಳಸಿ ದಂಪತಿಯ ಪುತ್ರಿ.