ಮಡಿಕೇರಿ, ಮಾ. ೧೬: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲಾ ರೈತ ಮೋರ್ಚಾದ ಸೋಮವಾರಪೇಟೆ ಮಂಡಲ ಸಮಿತಿ ಅಧ್ಯಕ್ಷರಾಗಿ ಜಗದೀಶ್ ತೊರೆನೂರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎ.ಪಿ. ಸುರೇಶ್, ಪಳಂಗಪ್ಪ ಗರ್ವಾಲೆ, ಶ್ರೀಧರ್ ಶಿರಂಗಾಲ, ಹೊನ್ನಪ್ಪ (ರಾಜು) ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಮಧು ಕಿಬೆಟ್ಟ, ರಕ್ಷಿತ್ ಚಿಕ್ಕಕೊಳತೂರು, ಕಾರ್ಯದರ್ಶಿಗಳಾಗಿ ಚೆಲುವರಾಜ್ ಮುಳ್ಳುಸೋಗೆ, ರಾಜ್‌ಕುಮಾರ್ ತಾಕೇರಿ, ಹೆಚ್.ಡಿ. ಸುರೇಶ್, ಅರುಣ್ ದುಂಡಳ್ಳಿ ನೇಮಕಗೊಂಡಿದ್ದಾರೆ.

ಖಜಾಂಚಿಯಾಗಿ ವಸಂತ್ ಕೆದಕಲ್, ಪದಾಧಿಕಾರಿಗಳಾಗಿ ಚೆನ್ನಕೇಶವ ಐಗೂರು, ಪ್ರಸನ್ನ ಕುಮಾರ್ ಕೂಡಿಗೆ, ಶಿವಕುಮಾರ್ ಗಣನೂರು, ಸಂತೋಷ್ ಹೆಬ್ಬಾಲೆ, ಉದಯ್ ಪಟ್ಟೆಮನೆ, ಜಯಂತ್ ಕಂಬಿಬಾಣೆ, ಕಲ್ಪನಾ ಕೂಡಿಗೆ, ಹೆಚ್.ಬಿ. ಧರ್ಮಪ್ಪ, ಪರಮೇಶ್ ಶಾಂತಳ್ಳಿ ಆಯ್ಕೆಯಾಗಿದ್ದಾರೆ ಎಂದು ರೈತ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.