ನಾಪೋಕ್ಲು, ಮಾ. ೧೬: ಸಮೀಪದ ಕೊಟ್ಟಮುಡಿಯ ಜೇನತ್ ಫ್ರೆಂಡ್ಸ್ ವತಿಯಿಂದ ಕೊಟ್ಟಮುಡಿಯಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್, ಕೊಟ್ಟಮುಡಿಯ ಝೆಡ್.ವೈ.ಸಿ. ಫ್ರೆಂಡ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.