ಶನಿವಾರಸಂತೆ, ಮಾ. ೧೬: ಶನಿವಾರಸಂತೆ ಸಮೀಪದ ನಾಕಲಗೋಡು ಗ್ರಾಮದ ನಿವಾಸಿ ಎನ್.ವಿ. ಸಂತೋಷ್ ಕುಮಾರ್ (೨೬) ಅವರು ಕಾಣೆಯಾಗಿರುವುದಾಗಿ ಅವರ ಪತ್ನಿ ಸಂಗೀತಾ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಗೀತಾ ೮ ವರ್ಷಗಳ ಹಿಂದೆ ನಾಕಲಗೋಡು ಗ್ರಾಮದ ವೀರಭದ್ರಪ್ಪ ಅವರ ಮಗ ಸಂತೋಷ್‌ನನ್ನು ಮದುವೆಯಾಗಿದ್ದರು. ಇದೀಗ ತಾ. ೧೩ ರಂದು ಮನೆಬಿಟ್ಟು ಹೋಗಿದ್ದು, ಇದುವರೆಗೂ ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಸಂಗೀತಾ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ದೊರೆತಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ದೂ. ೦೮೨೭೬-೨೮೩೩೩೩ ಸಂಖ್ಯೆಯನ್ನು ಸಂಪರ್ಕಿಸಲು ಇಲಾಖೆ ಕೋರಿದೆ.