ಪೆರಾಜೆ, ಮಾ. ೧೫: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪೆರಾಜೆ ಮತ್ತು ತೋಟಗಾರಿಕೆ ಇಲಾಖೆ ಮಡಿಕೇರಿ ಇವರ ಸಹಯೋಗದಲ್ಲಿ ರೈತ ಸದಸ್ಯರುಗಳಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮ ಸಹಕಾರ ಸದನದಲ್ಲಿ ಸಂಸ್ಥೆಯ ಅಧ್ಯಕ್ಷರು ಮತ್ತು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ತೋಟಗಾರಿಕೆ ಸಹಾಯಕ ನಿರ್ದೇಶಕ ಮುತ್ತಪ್ಪ ಬಿ.ಎಸ್., ಅಧಿಕಾರಿಗಳಾದ ಡಾಕ್ಟರ್ ವಿಜೇತ್ ಮತ್ತು ಗಣೇಶ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಸ್ಥೆಯ ಉಪಾಧ್ಯಕ್ಷ ಪೆರುಮುಂಡ. ಎಂ. ಅಶೋಕ, ನಿರ್ದೇಶಕರುಗಳಾದ ದಿನರಾಜ್ ಡೊಡ್ಡಡ್ಕ, ಶೇಷಪ್ಪ ನಿಡ್ಯಮಲೆ, ದಾಸಪ್ಪ ಮಡಿವಾಳ, ಜಯರಾಮ ಪಿ.ಟಿ., ಪ್ರಮೀಳಾ ಎನ್. ಮತ್ತು ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಂಜಪ್ಪ ನಿಡ್ಯಮಲೆ, ಸುಭಾಶ್ಚಂದ್ರ ಬಂಗಾರಕೋಡಿ ರವರು ಉಪಸ್ಥಿತರಿದ್ದರು. ಮಾಹಿತಿ ಕಾರ್ಯಾಗಾರವನ್ನು ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆಯ ಉಪನ್ಯಾಸಕ ಡಾ. ಆರ್.ಎಂ. ಕೆಂಚಾರೆಡ್ಡಿ ಇವರು ಜೇನು ಕೃಷಿಯ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ೩೦ ಜನ ರೈತ ಫಲಾನುಭವಿಗಳಿಗೆ ತಲಾ ಒಂದು ಜೇನು ಪೆಟ್ಟಿಗೆ ಮತ್ತು ಸ್ಟಾö್ಯಂಡ್, ಜೇನು ಕೃಷಿ ಬಗ್ಗೆ ಮಾಹಿತಿ ಪುಸ್ತಕಗಳನ್ನು ವಿತರಿಸಲಾಯಿತು.