ಮಡಿಕೇರಿ, ಮಾ. ೧೫ : ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕೋವಿಡ್-೧೯ ಪ್ರಕರಣಗಳು ಹೆಚ್ಚಾಗುತ್ತಿರುವದರಿಂದ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ಸಲುವಾಗಿ ಕೆಲವೊಂದು ಮಾರ್ಪಾಟುಗಳೊಂದಿಗೆ ಸರಕಾರದ ಸುತ್ತೋಲೆಯಲ್ಲಿ ಹೊರಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳಾದ ಮಾಸ್ಕ್ ಧರಿಸುವದು, ದೈಹಿಕ ಅಂತರ ಪಾಲನೆ ಮಾಡುವದು ಕಡ್ಡಾಯವಾಗಿದೆ. ಕೋವಿಡ್ ಲಸಿಕೆ ಪಡೆದುಕೊಳ್ಳುವದು, ಕೋವಿಡ್ ಪರೀಕ್ಷೆಗೆ ಒಳಪಡುವದು, ಇತ್ಯಾದಿ ನಿಯಂತ್ರಣ ಚಟುವಟಿಕೆಗಳಲ್ಲಿ ಸಾರ್ವಜನಿಕರು ಸಹಕರಿಸುವದು. ಅಲ್ಲದೆ, ಸಮಾರಂಭ, ಆಚರಣೆಗಳ ಸಂದರ್ಭದಲ್ಲಿ ಗುಂಪು ಸೇರದಂತೆ ತಡೆಯಲು ನಿಯಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಆದೇಶಿಸಿದ್ದಾರೆ. ಸಾಮಾಜಿಕ ಆಚರಣೆಗಳು, ಸಮಾರಂಭಗಳಲ್ಲಿ ೩.೨೫ಚ.ಮೀ. ಅಂತರ ಕಾಯ್ದುಕೊಳ್ಳಬೇಕು. ಮದುವೆ ಸಮಾರಂಭಗಳಲ್ಲಿ ತೆರೆದ ಪ್ರದೇಶದಲ್ಲಿ ೫೦೦ ಮಂದಿ, ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ ೨೦೦ ಮಂದಿ ಮೀರದಂತೆ, ಜನ್ಮ ದಿನ ಹಾಗೂ ಇತರ ಆಚರಣೆ ಸಂದರ್ಭ ತೆರೆದ ಪ್ರದೇಶದಲ್ಲಿ ೧೦೦ ಮಂದಿ ಮೀರದಂತೆ, ಸಭಾಂಗಣ,ಹಾಲ್, ಮುಚ್ಚಿದ ಪ್ರದೇಶಗಳಲ್ಲಿ ೫೦ಮಂದಿ ಮೀರದಂತೆ,ನಿಧನ,ಶವಸAಸ್ಕಾರದಲ್ಲಿ ತೆರೆದ ಪ್ರದೇಶಗಳು, ಸಭಾಂಗಣ, ಹಾಲ್, ಮುಚ್ಚಿದ ಪ್ರದೇಶಗಳಲ್ಲಿ ೫೦ರಿಂದ ೧೦೦ ಮಂದಿ ಮೀರದಂತೆ, ಇತರ ಸಮಾರಂಭಗಳಲ್ಲಿ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ೧೦೦ ಮಂದಿ ಮೀರದಂತೆ, ಧಾರ್ಮಿಕ ಆಚರಣೆಗಳಲ್ಲಿ ತೆರೆದ ಪ್ರದೇಶಗಳಲ್ಲಿ ೫೦೦ ಮಂದಿ ಮೀರದಂತೆ, ರಾಜಕೀಯ ಆಚರಣೆಗಳು, ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಲ್ಲಿ ೫೦೦ ಮಂದಿ ಮೀರದಂತೆ ಸೇರುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಈಗಾಗಲೇ ಕೇರಳ ಹಾಗೂ ಮಹಾರಾಷ್ಟçಗಳಿಂದ ಬರುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವದು, ಗಡಿಭಾಗಗಳಲ್ಲಿ ಪರೀಕ್ಷಾ ವರದಿಯನ್ನು ತೀವ್ರಗೊಳಿಸುವಂತೆ ಸೂಚಿಸಿದ್ದಾರೆ.