ಭಾರತದ ಇತಿಹಾಸದಲ್ಲಿ ಜಗತ್ಪçಸಿದ್ಧಿ ಪಡೆದು ನೆಲೆನಿಂತ ಸುವರ್ಣ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ.ಅದರಲ್ಲೂ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲ. ಅಲ್ಲಿನ ರಸ್ತೆಗಳಲ್ಲಿ ಮುತ್ತು,ರತ್ನಗಳನ್ನು ರಾಶಿ ಹಾಕಿ ಮಾರಲಾಗುತಿತ್ತು ಎಂದು ವಿದೇಶಿ ಬರಹಗಾರರು ತಮ್ಮ ಕೃತಿಗಳಲ್ಲಿ ಹಂಪಿಯ ಬಗ್ಗೆ ದಾಖಲಿಸಿದ್ದಾರೆ. ಸಾಮ್ರಾಜ್ಯದ ಸುತ್ತಲೂ ಕಿಡಿಕಾರುವ ಸುಲ್ತಾನರ ಪಡೆ ಇದ್ದರೂ ಕೂಡ ತನ್ನ ಶೌರ್ಯ, ಸಾಹಸದಿಂದ ಎಲ್ಲರನ್ನು ಬಗ್ಗು ಬಡಿದು ತಾನು ಇರುವವರೆಗೂ ಯಾರೂ ಕೂಡ ತಲೆಎತ್ತದಂತೆ ಅಡಗಿಸಿಟ್ಟಿದ್ದು ಕೃಷ್ಣದೇವರಾಯನ ಹೆಗ್ಗಳಿಕೆ. ಆದರೆ ಕೃಷ್ಣದೇವರಾಯ ಆಳಿದ ಕರ್ನಾಟಕ ಸಾಮ್ರಾಜ್ಯದ ಅಂತ್ಯ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ನಡೆದುಹೋಯಿತು. ಆ ಅಂತ್ಯಕ್ಕೆ ಕಾರಣವಾಗಿದ್ದೇ ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ. ಜಗತ್ತಿನ ಅತಿದೊಡ್ಡ ಬದಲಾವಣೆಗಳಿಗೆ ಕಾರಣವಾದ ಹಲವು ಯುದ್ಧಗಳ ಪೈಕಿ ತಾಳಿಕೋಟೆ ಕದನವು ಕೂಡ ಒಂದು. ಏಕೆಂದರೆ ಅಂದಿನ ವಿಶ್ವವಿಖ್ಯಾತಿ ಪಡೆದ ವಿಜಯನಗರ ಸಾಮ್ರಾಜ್ಯ ಈ ಕದನದ ನಂತರ ಅಳಿದು ಹೋಗಿದ್ದು ಮಾತ್ರವಲ್ಲ್ಲ ಶತಮಾನ ಗಳ ಕಾಲ ಹೆಸರಿಲ್ಲದಂತಾಯಿತು. ಬ್ರಿಟಿಷರು ಬಂದು ಭಾರತದಲ್ಲಿನ ಪುರಾತನ ಐತಿಹಾಸಿಕ ಪ್ರದೇಶಗಳನ್ನು ಪತ್ತೆ ಹಚ್ಚುವವರೆಗೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಗುರುತೇ ಸಿಗದಂತಾಯಿತು.ಅಷ್ಟೇ ಅಲ್ಲ ಅಂದು ಸಕಲ ವೈಭವಗಳನ್ನು ಕಂಡಿದ್ದ ಹಂಪಿ ಶತಮಾನಗಳ ನಂತರ ಅದು ಪಾಳುಬಿದ್ದಿತು. ಇತಿಹಾಸ ಕಂಡು ಕೇಳರಿಯದಂತ ಒಂದು ರಾಜಧಾನಿಯ ಮೇಲೆ ದಾಳಿ ನಡೆದು ಒಂದು ಭವ್ಯಾತಿಭವ್ಯ ನಗರ ಭಗ್ನ ಅವಶೇಷದಂತಾಯಿತು. ಕ್ರಿ.ಶ. ೧೫೨೯ ರಂದು ವಿಜಯನಗರ ಸಾಮ್ರಾಜ್ಯದ ಪಾಲಿಗೆ ಕರಾಳ ವರ್ಷವಾಗಿತ್ತು. ಸುಮಾರು ೨೦ವರ್ಷಗಳ ಕಾಲ ಸಕಲ ವೈಭೋಗದಿಂದ, ಶೌರ್ಯದಿಂದ ರಾಜ್ಯಭಾರ ಮಾಡಿ ಅತ್ಯಧಿಕ ಪ್ರದೇಶವನ್ನೆಲ್ಲಾ ವಿಸ್ತರಿಸಿ, ಒರಿಸ್ಸಾದ ಗಜಪತಿಗೆ ಗರ್ವಭಂಗ ಮಾಡಿ, ದೆಹಲಿಯ ಸುಲ್ತಾನರು ದಕ್ಷಿಣದತ್ತ ಸುಳಿಯದಂತೆ ಮಾಡಿದ ಗಂಡರ ಗಂಡ ಶ್ರೀಕೃಷ್ಣದೇವರಾಯ ಇಹಲೋಕ ತ್ಯಜಿಸಿದ್ದು. ತದನಂತರ ಹಂಪಿಯ ಸಿಂಹಾಸನ ದಿಕ್ಕು ಕಾಣದಂತೆ ಕಂಗಾಲಾಗಿತ್ತು. ಆಗ ಸಿಂಹಾಸನ ರೂಢನಾದವನೇ ಆತನ ತಮ್ಮ ಅಚ್ಯುತರಾಯ. ಆದರೆ ಆತ ಆಳ್ವಿಕೆ ಮಾಡುವಲ್ಲಿ ವಿಫಲನಾದನು. ಆಗ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದವನೇ ರಾಮರಾಯ. ಈತ ಕೃಷ್ಣದೇವರಾಯನ ಮಗಳನ್ನು ವಿವಾಹ ಮಾಡಿಕೊಂಡ ಕಾರಣ ಆತನನ್ನು ಅಳಿಯ ರಾಮರಾಯ ಎಂದು ಕರೆಯಲಾಯಿತು. ಆದರೆ ಅಳಿಯ ರಾಮರಾಯ ವೀರ, ಧೀರ, ಯುದ್ದನೀತಿ ನಿಪುಣ, ವೈರಿಗಳ ಪಾಲಿಗೆ ರಣಭಯಂಕರ ಹೀಗೆ ಸಾಕಷ್ಟು ಹಿರಿಮೆಗಳನ್ನು ಹೊಂದಿದ್ದನು ಅಲ್ಲದೇ ಕೃಷ್ಣದೇವ ರಾಯನ ಅವಧಿಯಲ್ಲಿ ಅವನ ಸೇನಾಧಿಪತಿಯಾಗಿ ಹಲವಾರು ಯುದ್ಧಗಳಲ್ಲಿ ಭಾಗಿಯಾಗಿದ್ದನು. ಹೀಗೆ ಅವನ ಶೌರ್ಯ, ಪರಾಕ್ರಮಗಳನ್ನು ನೋಡಿದ ಕೃಷ್ಣದೇವರಾಯ ತನ್ನ ಮಗಳನ್ನು ಆತನಿಗೆ ಧಾರೆಯೆರೆದು ಕೊಟ್ಟನು. ದುರಾದೃಷ್ಟವಶಾತ್ ಆ ಅವಧಿಯಲ್ಲೇ ಕೃಷ್ಣದೇವರಾಯ ಮರಣಹೊಂದಿದನು. ನಂತರ ಪಟ್ಟದಲ್ಲಿ ಬಂದ ಅಚ್ಯುತರಾಯ ಕ್ರಿ.ಶ. ೧೫೪೨ರಲ್ಲಿ ಮರಣಹೊಂದಿದ ಹಾಗೆ ಸದಾಶಿವರಾಯನನ್ನು ಪಟ್ಟಕ್ಕೆ ಕೂರಿಸಲಾಯಿತು. ಅಚ್ಯುತರಾಯನ ಕಾಲದಲ್ಲೂ ರಾಮರಾಯ ಮತ್ತು ತಿರುಮಲರಾಯ ಜೊತೆಗಿದ್ದರು. ಸದಾಶಿವರಾಯ ಇನ್ನೂ ಅಪ್ರಾಪ್ತನಾಗಿದ್ದ ಕಾರಣ ಆಡಳಿತವನ್ನು ರಾಮರಾಯ ನೋಡಿಕೊಂಡನು. ಕಾಲಕ್ರಮೇಣ ಅವನು ತನ್ನನ್ನು ತಾನೇ ಭಾರತದ ಇತಿಹಾಸದಲ್ಲಿ ಜಗತ್ಪçಸಿದ್ಧಿ ಪಡೆದು ನೆಲೆನಿಂತ ಸುವರ್ಣ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ.ಅದರಲ್ಲೂ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲ. ಅಲ್ಲಿನ ರಸ್ತೆಗಳಲ್ಲಿ ಮುತ್ತು,ರತ್ನಗಳನ್ನು ರಾಶಿ ಹಾಕಿ ಮಾರಲಾಗುತಿತ್ತು ಎಂದು ವಿದೇಶಿ ಬರಹಗಾರರು ತಮ್ಮ ಕೃತಿಗಳಲ್ಲಿ ಹಂಪಿಯ ಬಗ್ಗೆ ದಾಖಲಿಸಿದ್ದಾರೆ. ಸಾಮ್ರಾಜ್ಯದ ಸುತ್ತಲೂ ಕಿಡಿಕಾರುವ ಸುಲ್ತಾನರ ಪಡೆ ಇದ್ದರೂ ಕೂಡ ತನ್ನ ಶೌರ್ಯ, ಸಾಹಸದಿಂದ ಎಲ್ಲರನ್ನು ಬಗ್ಗು ಬಡಿದು ತಾನು ಇರುವವರೆಗೂ ಯಾರೂ ಕೂಡ ತಲೆಎತ್ತದಂತೆ ಅಡಗಿಸಿಟ್ಟಿದ್ದು ಕೃಷ್ಣದೇವರಾಯನ ಹೆಗ್ಗಳಿಕೆ. ಆದರೆ ಕೃಷ್ಣದೇವರಾಯ ಆಳಿದ ಕರ್ನಾಟಕ ಸಾಮ್ರಾಜ್ಯದ ಅಂತ್ಯ ಮಾತ್ರ ಯಾರೂ ಊಹಿಸದ ರೀತಿಯಲ್ಲಿ ನಡೆದುಹೋಯಿತು. ಆ ಅಂತ್ಯಕ್ಕೆ ಕಾರಣವಾಗಿದ್ದೇ ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ. ಜಗತ್ತಿನ ಅತಿದೊಡ್ಡ ಬದಲಾವಣೆಗಳಿಗೆ ಕಾರಣವಾದ ಹಲವು ಯುದ್ಧಗಳ ಪೈಕಿ ತಾಳಿಕೋಟೆ ಕದನವು ಕೂಡ ಒಂದು. ಏಕೆಂದರೆ ಅಂದಿನ ವಿಶ್ವವಿಖ್ಯಾತಿ ಪಡೆದ ವಿಜಯನಗರ ಸಾಮ್ರಾಜ್ಯ ಈ ಕದನದ ನಂತರ ಅಳಿದು ಹೋಗಿದ್ದು ಮಾತ್ರವಲ್ಲ್ಲ ಶತಮಾನ ಗಳ ಕಾಲ ಹೆಸರಿಲ್ಲದಂತಾಯಿತು. ಬ್ರಿಟಿಷರು ಬಂದು ಭಾರತದಲ್ಲಿನ ಪುರಾತನ ಐತಿಹಾಸಿಕ ಪ್ರದೇಶಗಳನ್ನು ಪತ್ತೆ ಹಚ್ಚುವವರೆಗೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಗುರುತೇ ಸಿಗದಂತಾಯಿತು.ಅಷ್ಟೇ ಅಲ್ಲ ಅಂದು ಸಕಲ ವೈಭವಗಳನ್ನು ಕಂಡಿದ್ದ ಹಂಪಿ ಶತಮಾನಗಳ ನಂತರ ಅದು ಪಾಳುಬಿದ್ದಿತು. ಇತಿಹಾಸ ಕಂಡು ಕೇಳರಿಯದಂತ ಒಂದು ರಾಜಧಾನಿಯ ಮೇಲೆ ದಾಳಿ ನಡೆದು ಒಂದು ಭವ್ಯಾತಿಭವ್ಯ ನಗರ ಭಗ್ನ ಅವಶೇಷದಂತಾಯಿತು. ಕ್ರಿ.ಶ. ೧೫೨೯ ರಂದು ವಿಜಯನಗರ ಸಾಮ್ರಾಜ್ಯದ ಪಾಲಿಗೆ ಕರಾಳ ವರ್ಷವಾಗಿತ್ತು. ಸುಮಾರು ೨೦ವರ್ಷಗಳ ಕಾಲ ಸಕಲ ವೈಭೋಗದಿಂದ, ಶೌರ್ಯದಿಂದ ರಾಜ್ಯಭಾರ ಮಾಡಿ ಅತ್ಯಧಿಕ ಪ್ರದೇಶವನ್ನೆಲ್ಲಾ ವಿಸ್ತರಿಸಿ, ಒರಿಸ್ಸಾದ ಗಜಪತಿಗೆ ಗರ್ವಭಂಗ ಮಾಡಿ, ದೆಹಲಿಯ ಸುಲ್ತಾನರು ದಕ್ಷಿಣದತ್ತ ಸುಳಿಯದಂತೆ ಮಾಡಿದ ಗಂಡರ ಗಂಡ ಶ್ರೀಕೃಷ್ಣದೇವರಾಯ ಇಹಲೋಕ ತ್ಯಜಿಸಿದ್ದು. ತದನಂತರ ಹಂಪಿಯ ಸಿಂಹಾಸನ ದಿಕ್ಕು ಕಾಣದಂತೆ ಕಂಗಾಲಾಗಿತ್ತು. ಆಗ ಸಿಂಹಾಸನ ರೂಢನಾದವನೇ ಆತನ ತಮ್ಮ ಅಚ್ಯುತರಾಯ. ಆದರೆ ಆತ ಆಳ್ವಿಕೆ ಮಾಡುವಲ್ಲಿ ವಿಫಲನಾದನು. ಆಗ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದವನೇ ರಾಮರಾಯ. ಈತ ಕೃಷ್ಣದೇವರಾಯನ ಮಗಳನ್ನು ವಿವಾಹ ಮಾಡಿಕೊಂಡ ಕಾರಣ ಆತನನ್ನು ಅಳಿಯ ರಾಮರಾಯ ಎಂದು ಕರೆಯಲಾಯಿತು. ಆದರೆ ಅಳಿಯ ರಾಮರಾಯ ವೀರ, ಧೀರ, ಯುದ್ದನೀತಿ ನಿಪುಣ, ವೈರಿಗಳ ಪಾಲಿಗೆ ರಣಭಯಂಕರ ಹೀಗೆ ಸಾಕಷ್ಟು ಹಿರಿಮೆಗಳನ್ನು ಹೊಂದಿದ್ದನು ಅಲ್ಲದೇ ಕೃಷ್ಣದೇವ ರಾಯನ ಅವಧಿಯಲ್ಲಿ ಅವನ ಸೇನಾಧಿಪತಿಯಾಗಿ ಹಲವಾರು ಯುದ್ಧಗಳಲ್ಲಿ ಭಾಗಿಯಾಗಿದ್ದನು. ಹೀಗೆ ಅವನ ಶೌರ್ಯ, ಪರಾಕ್ರಮಗಳನ್ನು ನೋಡಿದ ಕೃಷ್ಣದೇವರಾಯ ತನ್ನ ಮಗಳನ್ನು ಆತನಿಗೆ ಧಾರೆಯೆರೆದು ಕೊಟ್ಟನು. ದುರಾದೃಷ್ಟವಶಾತ್ ಆ ಅವಧಿಯಲ್ಲೇ ಕೃಷ್ಣದೇವರಾಯ ಮರಣಹೊಂದಿದನು. ನಂತರ ಪಟ್ಟದಲ್ಲಿ ಬಂದ ಅಚ್ಯುತರಾಯ ಕ್ರಿ.ಶ. ೧೫೪೨ರಲ್ಲಿ ಮರಣಹೊಂದಿದ ಹಾಗೆ ಸದಾಶಿವರಾಯನನ್ನು ಪಟ್ಟಕ್ಕೆ ಕೂರಿಸಲಾಯಿತು. ಅಚ್ಯುತರಾಯನ ಕಾಲದಲ್ಲೂ ರಾಮರಾಯ ಮತ್ತು ತಿರುಮಲರಾಯ ಜೊತೆಗಿದ್ದರು. ಸದಾಶಿವರಾಯ ಇನ್ನೂ ಅಪ್ರಾಪ್ತನಾಗಿದ್ದ ಕಾರಣ ಆಡಳಿತವನ್ನು ರಾಮರಾಯ ನೋಡಿಕೊಂಡನು. ಕಾಲಕ್ರಮೇಣ ಅವನು ತನ್ನನ್ನು ತಾನೇ ತಮ್ಮವರ ವಿರುದ್ದವೇ ಕಾದಾಡಲು ಶುರು ಮಾಡಿದ್ದು ವಿಜಯನಗರದ ಸೇನೆಯನ್ನು ಕಂಗಾಲಾಗಿ ಮಾಡಿತು. ಅಲ್ಲಿ ಯಾರು ಶತ್ರುಗಳು? ಯಾರು ತಮ್ಮವರು? ಎಂದು ತಿಳಿಯದ ಸೈನಿಕರು ಗೊಂದಲಕ್ಕೆ ಬಿದ್ದರು. ಆನೆ ಕುದುರೆಗಳು ದಿಕ್ಕಾಪಾಲಾಗಿ ಹೋದವು.ಈ ವೇಳೆ ಸೈನಿಕರು ಹಾಗೂ ಸೇನಾಪತಿಗಳು ರಾಮ ರಾಯನಿಗೆ ಯುದ್ಧ ಭೂಮಿಯಿಂದ ತೆರಳುವಂತೆ ಸೂಚನೆ ನೀಡಿದರು ಆ ಸಮಯದಲ್ಲೇ ಸುಲ್ತಾನರ ಮದಿಸಿದ ಆನೆಯೊಂದು ರಾಮರಾಯನತ್ತಾ ಬಂದ ರಭಸಕ್ಕೆ ಎತ್ತರದ ಪೀಠದ ಮೇಲೆ ಕುಳಿತಿದ್ದ ರಾಮರಾಯ ನೆಲಕ್ಕೆ ಉರುಳಿದನು. ರಾಮರಾಯ ಮೇಲೆದ್ದು ಖಡ್ಗವನ್ನು ಹಿಡಿದು ನಿಲ್ಲುವ ಪ್ರಯತ್ನ ಮಾಡಿದರೂ ಬಿಜಾಪುರದ ಸೈನಿಕರು ಆತನಿಗೆ ಹೆಚ್ಚು ಹೊತ್ತು ಕಾದಾಡುವ ಸಮಯ ಕೊಡದೆ ಆತನನ್ನು ನಿರಾಯುಧ ನನ್ನಾಗಿಸಿ ಅಲ್ಲೇ ಆತನ ತಲೆ ಕಡಿದರು. ರಾಮರಾಯ ಸತ್ತ ಸುದ್ದಿ ತಿಳಿಯುತ್ತಿದ್ದ ಹಾಗೆ ಅವನ ತಮ್ಮ ತಿರುಮಲರಾಯ ಹಂಪಿಗೆ ಬಂದು ಕೈಲಾದಷ್ಟು ಧನ-ಕನಕಗಳನ್ನು ತೆಗೆದುಕೊಂಡು ರಾಜಮನೆತನದ ಜೊತೆಗೆ ಪೆನುಕೊಂಡ ಕೋಟೆಯನ್ನು ಸೇರಿದನು. ಇತ್ತ್ತ ರಣಾಂಗಣದಲ್ಲಿ ಸುಲ್ತಾನರ ಸೈನಿಕರು ರಾಮರಾಯನ ಸೈನಿಕರ ಮಾರಣಹೋಮ ಮಾಡಿದರು. ತದನಂತರ ಹಂಪಿಗೆ ಲಗ್ಗೆ ಇಟ್ಟ ಸುಲ್ತಾನರ ಪಡೆ ವೈಭವದ ಹಂಪಿಯನ್ನು ನಾಶಗೊಳಿಸಿ ಅಪಾರ ಪ್ರಮಾಣದ ಚಿನ್ನ-ಆಭರಣಗಳನ್ನು ಲೂಟಿಮಾಡಿದರು, ಸಾಮಾನ್ಯ ಜನರ ಮೇಲೆ ಹತ್ಯೆ, ಅನಾಚಾರಗಳು ನಡೆದವು ಅಲ್ಲದೆ ಇಡಿ ನಗರಕ್ಕೆ ಬೆಂಕಿ ಹಚ್ಚಿದರು. ಕೆಲವೇ ದಿನಗಳಲ್ಲಿ ಹಂಪಿ ಹಾಳು ಕೊಂಪೆಯಾಯಿತು.ಷಾಹಿ ಸುಲ್ತಾನರ ಸೇನೆ ಹಂಪಿಯಲ್ಲಿದ್ದ ವಿರೂಪಾಕ್ಷ ದೇವಾಲಯವನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನು ಹಾಗೂ ಸುಂದರ ವಿಗ್ರಹಗಳನ್ನೂ ನಾಶ ಮಾಡಿದರು. ಅಂದು ಅವರು ಹಂಪಿಗೆ ಹಚ್ಚಿದ ಬೆಂಕಿ ಹಾರುವುದಕ್ಕೆ ಅದೆಷ್ಟೋ ತಿಂಗಳುಗಳು ಬೇಕಾದವು ಎಂದು ಇತಿಹಾಸಕಾರರು ದಾಖಲಿಸಿ ದ್ದಾರೆ. ಹಂಪಿಯಲ್ಲಿದ್ದ ಅಳಿದುಳಿದ ಸಂಪತ್ತನ್ನು ಷಾಹಿ ಸುಲ್ತಾನರು ಆನೆ, ಕುದುರೆಗಳ ಮೇಲೆ ಸಾಗಿಸಿದರು. ಅಲ್ಲಿದ್ದ ಅಮೋಘ ಸಂಪತ್ತನ್ನು ಹೇಗೆಲ್ಲಾ ಲೂಟಿಮಾಡಲಾಯಿತು ಎಂಬುದರ ಬಗ್ಗೆ ಪರ್ಶಿಯನ್ ಇತಿಹಾಸಕಾರರಾದ ‘ಫರಿಸ್ತಾ' ಅತ್ಯಂತ ಅಚ್ಚುಕಟ್ಟಾಗಿ ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ.
ಯುದ್ಧದ ನಂತರ ರಾಮರಾಯನ ಮಗ ಶ್ರೀರಂಗದೇವರಾಯ ಆನೆಗೊಂದಿಯನ್ನು ಕೇಂದ್ರವಾಗಿಟ್ಟು ಸುಲ್ತಾನರ ಸಾಮಂತ ರಾಜನಾಗಿ ಆಳ್ವಿಕೆ ನಡೆಸಿದನು. ಮತ್ತೊಂದೆಡೆ ತಿರುಮಲರಾಯ ಪೆನುಕೊಂಡದಲ್ಲಿ ಅರವೀಡು ವಂಶವನ್ನು ಸ್ಥಾಪಿಸಿ ಆಳ್ವಿಕೆ ನಡೆಸಿದನು. ಕೊನೆಗೆ ಕ್ರಿ.ಶ. ೧೬೮೧ರಲ್ಲಿ ವಿಜಯನಗರ ಸಾಮ್ರಾಜ್ಯವು ಪತನವಾಯಿತು. ದುರಾದೃಷ್ಟವೆಂದರೆ ಕೇವಲ ಒಂದೇ ಒಂದು ಯುದ್ಧದಲ್ಲಿ ಸೋತ ಕಾರಣಕ್ಕಾಗಿ ಇಡೀ ಸಾಮ್ರಾಜ್ಯ ನುಚ್ಚು ನೂರಾಯಿತು. ಇಂದು ಹಂಪಿಗೆ ಭೇಟಿಕೊಟ್ಟರೆ ವಿಜಯನಗರದ ಗತ ವೈಭವ ಕಣ್ಣ ಮುಂದೆ ಬಾರದೇ ಇರಲು ಸಾಧ್ಯವಿಲ್ಲ ಕಾರಣ ಅಂದಿನ ಅವರ ಕಲಾ ಶ್ರೀಮಂತಿಕೆ ಹಂಪಿಯ ಭಗ್ನ ಮಂಟಪಗಳಲ್ಲಿ ಕೂಡ ಅಚ್ಚೊತ್ತಿದ ಹಾಗೆ ಕಾಣಿಸುತ್ತದೆ.
ಹೀಗಿದ್ದ ವಿಜಯನಗರ ಸಾಮ್ರಾಜ್ಯ ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮೆರೆದು ಒಂದೇ ಒಂದು ಯುದ್ಧದಿಂದ, ಒಂದೇ ಒಂದು ತಪ್ಪಿನಿಂದ ಭವ್ಯ ವಿಜಯನಗರ ಸಾಮ್ರಾಜ್ಯ ಅಳಿದು ಹೋಗಿತ್ತು ಎನ್ನುವುದು ನಿಜಕ್ಕೂ ವಿಧಿಯ ವಿಪರ್ಯಾಸವೆ!!
- ಸತೀಶ್ ಕುಮಾರ್ ಎ.ಎಸ್.
ಇತಿಹಾಸ ಉಪನ್ಯಾಸಕರು, ವೀರಾಜಪೇಟೆ