ಚೆಟ್ಟಳ್ಳಿ, ಮಾ. ೧೫: ಕರಡ ಗ್ರಾಮದ ಬೆಟ್ಟಸಾಲುಗಳ ನಡುವೆ ಇರುವ ಮಲೆತಿರಿಕೆ ದೇವಾಯದಲ್ಲಿನ ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ತಾ. ೧ ರಿಂದ ಧಾರ್ಮಿಕ ಕಾರ್ಯ ಆರಂಭಗೊAಡಿತು. ಬೆಳಗ್ಗಿನ ಜಾವ ಪಟ್ರಪಂಡ ಕುಟುಂಬದಿAದ ಎತ್ತುಪೋರಾಟವನ್ನು ದೇವಾಲಯಕ್ಕೆ ಒಪ್ಪಿಸಿದ ನಂತರ ನಾಡಿನವರು ಎತ್ತು ಪೋರಾಟವನ್ನು ದೇವರಿಗೆ ಅರ್ಪಿಸಿದರು. ಕರಡ ಭಗವತಿ ದೇವಾಲಯದಿಂದ ದೇವರ ಭಂಡಾರವನ್ನು ತಂದು ದೇವರಸನ್ನಿಧಿಯಲ್ಲಿ ಇಡಲಾಯಿತು.

ಸನ್ನಿಧಿಯಲ್ಲಿ ಊರಿನ ಹಿರಿಯರು ದುಡಿಕೊಟ್ಟು ಹಾಡನ್ನು ಹಾಡಿದರು. ಮಧ್ಯಾಹ್ನ ದೇವರಿಗೆ ವಿಶೇಷವಾಗಿ ಅಲಂಕರಿಸಿ ಮಹಾ ಪೂಜೆ ನೆರವೇರಿತು. ನೆರೆದಿದ್ದ ಸಾವಿ ರಾರು ಭಕ್ತರು ಹರಕೆ ಭಂಡಾರವನ್ನು ಒಪ್ಪಿಸಿದರು. ತೀರ್ಥಪ್ರಸಾದ ಪಾಯಸವನ್ನು ವಿತರಿಸಲಾಯಿತು. ಸಂಜೆ ಭಂಡಾರದ ಲೆಕ್ಕಾಚಾರ ಮುಗಿಸಿ ದೇವಭಂಡಾರವನ್ನು ಕರಡ ಭಗವತಿ ನೆಲೆಯಲ್ಲಿ ಇಡಲಾಯಿತು. ಹಲವು ಸಂಪ್ರದಾಯದೊAದಿಗೆ ಹಬ್ಬ ಕಟ್ಟು ಮುರಿಯಲಾಯಿತು. À