ಎನ್ಎಂಪಿಟಿಗೆ ಖಾಸಗಿ ಸಹಭಾಗಿತ್ವ
ಮಂಗಳೂರು, ಮಾ. ೧೫: ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹಾಗೂ ಪಾಲುದಾರಿಕೆಯ ನೆಲೆಯಡಿಯಲ್ಲಿ ನವ ಮಂಗಳೂರು ಬಂದರಿನ ಹಲವು ಕಾರ್ಯಾಚರಣೆ ಜವಾಬ್ದಾರಿಗಳನ್ನು ಖಾಸಗಿ ಸಂಸ್ಥೆಯಾದ ಜೆ.ಎಸ್.ಡಬ್ಲೂö್ಯ. ಪಡೆದುಕೊಂಡಿದೆ. ನವಮಂಗಳೂರು ಬಂದರಿನ ಹಡಗು ಕಟ್ಟೆ ನಂ. ೧೪ನ್ನು ಕಂಟೈನರ್ ಮತ್ತು ಇತರ ಸರಕು ನಿರ್ವಹಣೆಗಾಗಿ ೩೦ ವರ್ಷಗಳ ಲೀಸ್ ಆಧಾರದಲ್ಲಿ ತನ್ನದಾಗಿಸಿಕೊಂಡಿದೆ. ಜೆ.ಎಸ್.ಡಬ್ಲೂö್ಯ. ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಜೆ.ಎಸ್.ಡಬ್ಲೂö್ಯ. ಮಂಗಳೂರು ಕಂಟೈನರ್ ಟರ್ಮಿನಲ್ ಸಂಸ್ಥೆ ಸುಮಾರು ೨೮೦.೭೧ ಕೋಟಿ ಹಣವನ್ನು ವಿನಿಯೋಗಿಸುತ್ತಿದೆ. ಇದರಿಂದಾಗಿ ಕಾಫಿ ರಫ್ತು ಸೇರಿದಂತೆ ಇತರ ಸಾಮಗ್ರಿಗಳ ರಫ್ತು ಮತ್ತು ಆಮದು ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಸಂಸ್ಥೆಯ ಸಲಹೆಗಾರರಾಗಿ ಈ ಹಿಂದೆ ಎನ್.ಎಂ.ಪಿ.ಟಿ.ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನವನೀತ್ ಕುಮಾರ್ ಅವರು ಈ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಹಾಯಕ ಪ್ರಧಾನ ವ್ಯವಸ್ಥಾಪಕ ದಿಲೀಪ್ ಶೆಟ್ಟಿ ನೂತನ ಯೋಜನೆಯ ಸ್ಥಳೀಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಮುಜಾಹಿದ್ದೀನ್ ಸಂಘಟನೆಯ ಉಗ್ರ ಅರಿಜ್ ಖಾನ್ಗೆ ಗಲ್ಲು ಶಿಕ್ಷೆ
ನವದೆಹಲಿ, ಮಾ. ೧೫: ೨೦೦೮ರಲ್ಲಿ ನಡೆದಿದ್ದ ಬಾಟ್ಲಾಹೌಸ್ ಎನ್ಕೌಂಟರ್ಗೆ ಸಂಬAಧಿಸಿದAತೆ ಮುಜಾಹಿದ್ದೀನ್ ಸಂಘಟನೆಯ ಉಗ್ರ ಅರಿಜ್ ಖಾನ್ಗೆ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಎನ್ಕೌಂಟರ್ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಲ್ಲಿ ಅರಿಜ್ ಖಾನ್ನನ್ನು ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು. ಅರಿಜ್ ಖಾನ್ ಮತ್ತವನ ಸಹಚರರು ಪೊಲೀಸ್ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿರುವುದು ಸಾಕ್ಷö್ಯಧಾರಗಳಿಂದ ದೃಢಪಟ್ಟಿರುವುದಾಗಿ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಂದೀಪ್ ಯಾದವ್ ಹೇಳಿದರು. ಈ ಹಿನ್ನೆಲೆ ಅರಿಜ್ ಖಾನ್ಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದರು. ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ೨೦೦೮ರಲ್ಲಿ ನಡೆದಿದ್ದ ಬಾಟ್ಲಾಹೌಸ್ ಎನ್ಕೌಂಟರ್ ವೇಳೆಯಲ್ಲಿ ದೆಹಲಿಯ ವಿಶೇಷ ವಿಭಾಗದ ಇನ್ಸ್ಪೆಕ್ಟರ್ ಶರ್ಮಾ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣಾ ನ್ಯಾಯಾಲಯವೊಂದು ಜುಲೈ ೨೦೧೩ ರಂದು ಇಂಡಿಯನ್ ಮುಜಾಹಿದ್ದೀನ್ ಉಗ್ರ ಶಹಜಾದ್ ಅಹ್ಮದ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಅರಿಜ್ ಖಾನ್ನನ್ನು ಫೆಬ್ರವರಿ ೧೪, ೨೦೧೮ರಲ್ಲಿ ಬಂಧಿಸಲಾಗಿತ್ತು. ಇದೀಗ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ.
ತಂದೆ ಶವ ಸಂಸ್ಕಾರಕ್ಕೆ ಹೂ ತರಲು ಹೋಗಿದ್ದ ಪುತ್ರ ಸಾವು
ಉತ್ತರ ಕನ್ನಡ, ಮಾ. ೧೫: ತಂದೆಯ ಶವ ಸಂಸ್ಕಾರಕ್ಕೆ ಹೂ ತರಲು ಹೋಗಿದ್ದ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಈ ಘಟನೆ ಶಿರಸಿ ನಗರದ ಎಸ್ಬಿಐ ಸರ್ಕಲ್ ಬಳಿ ಸಂಭವಿಸಿದೆ. ತಂದೆಯ ಶವಸಂಸ್ಕಾರಕ್ಕೆAದು ಹೂವು ತರಲು ತೆರಳಿದ್ದ ಮಗ ಮತ್ತು ಇನ್ನೊಬ್ಬ ಸಂಬAಧಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (೩೪), ಸುನೀಲ ಇಂದೂರ (೨೬) ಎಂದು ಗುರುತಿಸಲಾಗಿದೆ. ರವಿಚಂದ್ರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ಇಬ್ಬರೂ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಮುಖಾ ಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಲ್ಲಿದ್ದ ಯುವಕರಿಬ್ಬರೂ ಬಸ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಮೂಲಕ ಕುಟುಂಬದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ತಂದೆ, ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬAಧಿಸಿದAತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರತಾ ಕಾಯ್ದೆಯ ವೈಯಕ್ತಿಕ ಉಲ್ಲಂಘನೆ-ಬAಧನ
ಬೆAಗಳೂರು, ಮಾ. ೧೫: ನಗರದಲ್ಲಿ ಪ್ರಪ್ರಥಮ ಬಾರಿಗೆ ಭದ್ರತಾ ಕಾಯ್ದೆಯ ವೈಯಕ್ತಿಕ ಮುಚ್ಚಳಿಕೆ ಹಾಗೂ ಜಾಮೀನು ಉಲ್ಲಂಘಿಸಿದ ಆರೋಪಿ ಓರ್ವನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ. ಹಳ್ಳಿಯ ಜೈಬಾ ಶಾದಿ ಮಹಲ್ ಹತ್ತಿರದ ಜಬೀ ಅಲಿಯಾಸ್ ಜಬೀವುಲ್ಲಾ(೨೫)ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಅವರು ಮಾಹಿತಿ ನೀಡಿದ್ದಾರೆ. ಆರೋಪಿಯು ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗವುAಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿವುಂಟು ಮಾಡುವ ಕೃತ್ಯದಲ್ಲಿ ತೊಡಗಿದ್ದನು. ಭದ್ರತಾ ಕಾಯ್ದೆಯ ಪ್ರಕರಣ ದಾಖಲಿಸಿ ೧ ವರ್ಷದ ಅವಧಿಗೆ ವೈಯಕ್ತಿಕ ಮುಚ್ಚಳಿಕೆ ಹಾಗೂ ೧ ಲಕ್ಷ ಮೊತ್ತಕ್ಕೆ ಶೂರಿಟಿಯನ್ನು ನೀಡಲಾಗಿತ್ತು. ಅದರಂತೆ ಮುಚ್ಚಳಿಕೆಯ ಜಾರಿಯಿರುವ ಅವಧಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಭಂಗ ಬರದಂತೆ ಅಪರಾಧ ಎಸಗದೇ, ತಲೆಮರೆಸಿಕೊಳ್ಳದೇ, ಸದ್ವರ್ತನೆಯಿಂದ ಇರಬೇಕು ಎಂದು ಆದೇಶಿಸಿ ವೈಯಕ್ತಿಕ ಮುಚ್ಚಳಿಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಘಟನೆಗೆ ಸಂಬAಧಿಸಿದAತೆ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಫಾರಿ ವಾಹನ ಅಟ್ಟಾಡಿಸಿದ ಕಾಡಾನೆಗಳು
ಚಾಮರಾಜನಗರ, ಮಾ. ೧೫: ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿAದ ಒಂದು ಆನೆ ದಾಳಿ ಮಾಡಿದರೆ ಮುಂದಿನಿAದಲೂ ಸಲಗವೊಂದು ಜೀಪನ್ನು ಅಡ್ಡ ಹಾಕಿ ಪ್ರವಾಸಿಗರನ್ನು ನಡುಗಿಸಿದ ಘಟನೆ ಚಾಮರಾಜನಗರದ ಕೆ. ಗುಡಿಯಲ್ಲಿ ನಡೆದಿದೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿAದಲೂ ಆನೆಯೊಂದು ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಅದೃಷ್ಟವಶಾತ್, ಜೀಪ್ ಚಾಲಕ ನಾಗರಾಜ್ ಅವರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಈ ಕುರಿತು, ಕೆ. ಗುಡಿ ಆರ್ಎಫ್ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಭತ್ತದಗದ್ದೆ ಕೆರೆ ರಸ್ತೆಯಲ್ಲಿ ಒಂಭತ್ತು ಆನೆಗಳ ಗುಂಪಿದೆ ಎಂದರು. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ ಆದರೆ, ಎರಡು ಆನೆ ಸಫಾರಿ ವಾಹನ ಅಡ್ಡಗಟ್ಟಿದ ಘಟನೆ ತೀರಾ ಅಪರೂಪವಾಗಿದೆ ಎಂದಿದ್ದಾರೆ.
ಕೋವಿಡ್ ನಿಯಂತ್ರಣ ಸಂಬAಧ ಆರೋಗ್ಯ ತಜ್ಞರೊಂದಿಗೆ ಸಿಎಂ ಸಭೆ, ಮಾಸ್ಕ್ ಧರಿಸದಿದ್ದರೆ ದಂಡದ ಎಚ್ಚರಿಕೆ
ಬೆಂಗಳೂರು, ಮಾ. ೧೫: ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಂಜೆ ವಿಧಾನಸೌಧದಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿ ಕೋವಿಡ್ ಕುರಿತು ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದರು. ಸಭೆಯಲ್ಲಿ ಕೇರಳ ಮತ್ತು ಮಹಾರಾಷ್ಟçದಿಂದ ರಾಜ್ಯಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯ ಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ದಂಡ ಹೆಚ್ಚಳ ಹಾಗೂ ಲಸಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ಸೇರಿದಂತೆ ಇತರ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಕೋವಿಡ್ ಪರಿಸ್ಥಿತಿ ಅವಲೋಕನ ನಡೆಸಿ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ತಜ್ಞರ ಅಭಿಪ್ರಾಯದಂತೆ ೧೪ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಬೀದರ್ ಕಲಬುರಗಿ, ಬೆಂಗಳೂರು ಗ್ರಾಮಾಂತರ ಉಡುಪಿ ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೋವಿಡ್ ಎರಡನೆ ಅಲೆಯ ಭೀತಿಗೆ ಲಸಿಕೆ ಕಾರ್ಯಕ್ರಮ ಹೆಚ್ಚಳ ಮಾಡಬೇಕಿದೆ ಎಂದರು. ಆರೋಗ್ಯ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗಳಿಗೆ ಶೇ. ೫೦ ರಷ್ಟು ಲಸಿಕೆ ಹಾಕಲಾಗಿದೆ. ಕೋವಿಡ್ ಅನ್ನು ನಿಯಂತ್ರಿಸುವ ಸಂಬAಧ ಮತದಾರರ ಪಟ್ಟಿಯನ್ನಾಧರಿಸಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.