ಪಾಲಿಬೆಟ್ಟ, ಮಾ. ೧೫: ಹುಲಿ ದಾಳಿಯಿಂದ ಮೂವರು ಬಲಿಯಾಗಿದ್ದು ಹುಲಿ ಸೆರೆಹಿಡಿಯಬೇಕೆನ್ನುವ ಅಹೋರಾತ್ರಿ ಹೋರಾಟ ಹಲವು ದಿನಗಳಿಂದ ನಡೆಯುತ್ತಿದೆಯಾದರೂ ಹೋರಾಟದ ದಿಕ್ಕು ತಪ್ಪಿಸುವ ದೃಷ್ಟಿಯಿಂದ ಶಾಸಕ ಅಪ್ಪಚ್ಚು ರಂಜನ್ ಹೋರಾಟಗಾರರೇ ಕಾನೂನು ಕೈಗೆತ್ತಿಕೊಳ್ಳಿ ಎಂಬ ಹೇಳಿಕೆ ನೀಡಿ ಪ್ರಚೋದಿಸುವ ಮುನ್ನ ಶಾಸಕರೇ ಈ ಕೆಲಸ ಮಾಡಲಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಪ್ರಶ್ನಿಸಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ಸಂಕಷ್ಟ ಎದುರಿಸುತ್ತಿರುವ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದ್ದರೂ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಯೋಜನೆಗಳಾಗಲಿ. ವಿಶೇಷ ಅನುದಾನಗಳಾಗಲಿ ಜಿಲ್ಲೆಗೆ ಸಿಗುತ್ತಿಲ್ಲ.
ಕಳೆದ ಹಲವು ವರ್ಷಗಳಿಂದಲೂ ಕಾಡುಪ್ರಾಣಿಗಳ ಹಾವಳಿ ಸಮಸ್ಯೆ ಕಾರ್ಮಿಕರು. ರೈತರನ್ನ ಕಾಡುತ್ತಿದ್ದರೂ ಇದುವರೆಗೂ ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೆ. ಜನರು ಬೀದಿಗಿಳಿದು ಹೋರಾಟಕ್ಕೆ ಮುಂದಾದ ಸಂದರ್ಭದಲ್ಲಿ ಸದನದಲ್ಲಿ ಹುಲಿ ಮದುವೆಯಾಗುತ್ತೇವೆ ಎಂದು ಪ್ರಶ್ನಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
-ಪುತ್ತಂ ಪ್ರದೀಪ್