
ಸೋಮವಾರಪೇಟೆ,ಮಾ.೧೬: ಒಂದೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಹಚ್ಚಹಸಿರಿ ನಂತಿರುವ ಕಾಫಿ ತೋಟಕ್ಕೆ ತೆರಳಲು ಸೋಲಾರ್ ಬೇಲಿಯ ತಡೆ. ಪರಿಣಾಮ ಅನ್ಯ ಮಾರ್ಗವಿಲ್ಲದೇ ಜನವಸತಿ, ಕೃಷಿ ಪ್ರದೇಶಕ್ಕೆ ಲಗ್ಗೆ.., ಫಸಲು ನಷ್ಟ.., ಜನತೆಗೆ ಜೀವ ಭಯ..!
ಇಂತಹ ಸನ್ನಿವೇಶ ಇದೀಗ ತಾಲೂಕಿನ ಬಾಣಾವರ, ಅಬ್ಬೂರುಕಟ್ಟೆ, ಆಲೂರುಸಿದ್ದಾಪುರ, ಸಂಗಯ್ಯನಪುರ, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವೆನಿಸಿವೆ. ಈ ಭಾಗದ ಜನರು ಕಾಡಾನೆಗಳೊಂದಿಗೆ ಪ್ರತಿದಿನ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವರ್‌ಕೊಲ್ಲಿ-ಐಗೂರು ಮಾರ್ಗದಲ್ಲಿ ಅರಣ್ಯದಿಂದ ಟಾಟಾ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವೆನಿಸಿವೆ. ಈ ಭಾಗದ ಜನರು ಕಾಡಾನೆಗಳೊಂದಿಗೆ ಪ್ರತಿದಿನ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವರ್‌ಕೊಲ್ಲಿ-ಐಗೂರು ಮಾರ್ಗದಲ್ಲಿ ಅರಣ್ಯದಿಂದ ಟಾಟಾ (ಮೊದಲ ಪುಟದಿಂದ) ಮರಗಳು ಒಣಗಿಹೋಗಿದ್ದು, ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬಟಾಬಯ ಲಾಗಿದೆ. ಒಣಗಿದ ಎಲೆಗಳು ಅರಣ್ಯದಲ್ಲಿ ಹಾಸಿದಂತೆ ಕಂಡುಬರುತ್ತಿದ್ದು, ಆಗಾಗ್ಗೆ ಕಾಡ್ಗಿಚ್ಚಿಗೆ ಒಳಗಾಗುತ್ತಿವೆ. ಕುಡಿಯಲು ನೀರು/ತಿನ್ನಲು ಆಹಾರವೂ ಇಲ್ಲದೇ ಇರುವ ಸನ್ನಿವೇಶದಲ್ಲಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದ ಕಾಡಾನೆಗಳು ಅಲ್ಲಿ ದೊರಕುತ್ತಿದ್ದ ಹಲಸು, ಬೈನೆ, ಇತ್ಯಾದಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೆ, ತೋಟದೊಳಗೆ ನಿತ್ಯ ತುಂಬಿರುತ್ತಿದ್ದ ಕೆರೆಯಲ್ಲಿ ನೀರು ಕುಡಿದು ಬಾಯಾರಿಕೆ ಹೋಗಲಾಡಿಸಿಕೊಳ್ಳುತ್ತಿದ್ದವು.
ಆದರೆ ಕಳೆದ ಮೂರು ವರ್ಷಗಳಿಂದ ಈ ಪರಿಸ್ಥಿತಿ ಬದಲಾಗಿದ್ದು, ತೋಟಕ್ಕೆ ತೆರಳದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಮನೆ ಮುಂದೆ ಬೆಳೆದ ತೆಂಗು, ಬಾಳೆ, ಕಾಫಿ ತೋಟದೊಳಗಿರುವ ಕೃಷಿ ಫಸಲು, ಗದ್ದೆಯಲ್ಲಿ ಬೆಳೆಯಲಾಗಿರುವ ಭತ್ತದ ಪೈರುಗಳನ್ನು ತಿಂದು ನಾಶಗೊಳಿಸುತ್ತಿವೆ. ಅರಣ್ಯ ಇಲಾಖೆಯಿಂದ ಅರಣ್ಯದ ಅಂಚಿನಲ್ಲಿ ಆನೆ ಕಂದಕ ತೆರೆಯಲಾಗಿದ್ದರೂ ಕಾಜೂರಿನ ಕೆಲ ಭಾಗದಲ್ಲಿ ಹಾಗೆಯೇ ಬಿಡಲಾಗಿದೆ. ಇತ್ತ ಅರಣ್ಯದೊಳಗೆ ಹಸಿರು ಮಾಯವಾಗಿ ಒಣ ಪ್ರದೇಶದಂತಾಗಿರುವ ಹಿನ್ನೆಲೆ ಆನೆ ಕಂದಕ ಸಮರ್ಪಕವಾಗಿಲ್ಲದ ಕಡೆಗಳಿಂದ ಆನೆಗಳು ಅರಣ್ಯದಿಂದ ಹೊರಬರುತ್ತಿವೆ.
ಈ ಹಿಂದೆ ಅರಣ್ಯದಿಂದ ನೇರವಾಗಿ ಟಾಟಾ ಕಾಫಿ ಎಸ್ಟೇಟ್‌ಗೆ ತೆರಳುತ್ತಿದ್ದ ಕಾಡಾನೆಗಳಿಗೆ ಇದೀಗ ಸೋಲಾರ್ ಬೇಲಿ ತಡೆಯಾಗಿದೆ. ಕೋವರ್‌ಕೊಲ್ಲಿಯಿಂದ ಐಗೂರುವರೆಗೆ ಹಬ್ಬಿರುವ ತೋಟದ ಬೇಲಿಗೆ ಸೋಲಾರ್ ಅಳವಡಿಸಿರುವದರಿಂದ ಕಾಡಾನೆಗಳಿಗೆ ದಿಕ್ಕು ತೋಚದಂತಾಗಿ (ಮೊದಲ ಪುಟದಿಂದ) ಮರಗಳು ಒಣಗಿಹೋಗಿದ್ದು, ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬಟಾಬಯ ಲಾಗಿದೆ. ಒಣಗಿದ ಎಲೆಗಳು ಅರಣ್ಯದಲ್ಲಿ ಹಾಸಿದಂತೆ ಕಂಡುಬರುತ್ತಿದ್ದು, ಆಗಾಗ್ಗೆ ಕಾಡ್ಗಿಚ್ಚಿಗೆ ಒಳಗಾಗುತ್ತಿವೆ. ಕುಡಿಯಲು ನೀರು/ತಿನ್ನಲು ಆಹಾರವೂ ಇಲ್ಲದೇ ಇರುವ ಸನ್ನಿವೇಶದಲ್ಲಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದ ಕಾಡಾನೆಗಳು ಅಲ್ಲಿ ದೊರಕುತ್ತಿದ್ದ ಹಲಸು, ಬೈನೆ, ಇತ್ಯಾದಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೆ, ತೋಟದೊಳಗೆ ನಿತ್ಯ ತುಂಬಿರುತ್ತಿದ್ದ ಕೆರೆಯಲ್ಲಿ ನೀರು ಕುಡಿದು ಬಾಯಾರಿಕೆ ಹೋಗಲಾಡಿಸಿಕೊಳ್ಳುತ್ತಿದ್ದವು.
ಆದರೆ ಕಳೆದ ಮೂರು ವರ್ಷಗಳಿಂದ ಈ ಪರಿಸ್ಥಿತಿ ಬದಲಾಗಿದ್ದು, ತೋಟಕ್ಕೆ ತೆರಳದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಮನೆ ಮುಂದೆ ಬೆಳೆದ ತೆಂಗು, ಬಾಳೆ, ಕಾಫಿ ತೋಟದೊಳಗಿರುವ ಕೃಷಿ ಫಸಲು, ಗದ್ದೆಯಲ್ಲಿ ಬೆಳೆಯಲಾಗಿರುವ ಭತ್ತದ ಪೈರುಗಳನ್ನು ತಿಂದು ನಾಶಗೊಳಿಸುತ್ತಿವೆ. ಅರಣ್ಯ ಇಲಾಖೆಯಿಂದ ಅರಣ್ಯದ ಅಂಚಿನಲ್ಲಿ ಆನೆ ಕಂದಕ ತೆರೆಯಲಾಗಿದ್ದರೂ ಕಾಜೂರಿನ ಕೆಲ ಭಾಗದಲ್ಲಿ ಹಾಗೆಯೇ ಬಿಡಲಾಗಿದೆ. ಇತ್ತ ಅರಣ್ಯದೊಳಗೆ ಹಸಿರು ಮಾಯವಾಗಿ ಒಣ ಪ್ರದೇಶದಂತಾಗಿರುವ ಹಿನ್ನೆಲೆ ಆನೆ ಕಂದಕ ಸಮರ್ಪಕವಾಗಿಲ್ಲದ ಕಡೆಗಳಿಂದ ಆನೆಗಳು ಅರಣ್ಯದಿಂದ ಹೊರಬರುತ್ತಿವೆ.
ಈ ಹಿಂದೆ ಅರಣ್ಯದಿಂದ ನೇರವಾಗಿ ಟಾಟಾ ಕಾಫಿ ಎಸ್ಟೇಟ್‌ಗೆ ತೆರಳುತ್ತಿದ್ದ ಕಾಡಾನೆಗಳಿಗೆ ಇದೀಗ ಸೋಲಾರ್ ಬೇಲಿ ತಡೆಯಾಗಿದೆ. ಕೋವರ್‌ಕೊಲ್ಲಿಯಿಂದ ಐಗೂರುವರೆಗೆ ಹಬ್ಬಿರುವ ತೋಟದ ಬೇಲಿಗೆ ಸೋಲಾರ್ ಅಳವಡಿಸಿರುವದರಿಂದ ಕಾಡಾನೆಗಳಿಗೆ ದಿಕ್ಕು ತೋಚದಂತಾಗಿ ಅರಣ್ಯ-ಮತ್ತೊಂದೆಡೆ ಸೋಲಾರ್ ಬೇಲಿಯ ನಡುವೆ ಕಾಡಾನೆಗಳು ಗ್ರಾಮಗಳತ್ತ ಧಾಳಿ ಇಡುತ್ತಿವೆ. ಇದರೊಂದಿಗೆ ಯಡವನಾಡು, ಬಾಣಾವರ, ಆಲೂರುಸಿದ್ದಾಪುರ, ಸಿದ್ಧಲಿಂಗಪುರ, ಸಂಗಯ್ಯನಪುರಗಳಲ್ಲೂ ಆನೆ ಹಾವಳಿ ನಿರಾತಂಕವಾಗಿ ನಡೆಯುತ್ತಿದೆ.
ಕಳೆದ ೧೫ ದಿನಗಳ ಹಿಂದಷ್ಟೇ ಅಬ್ಬೂರುಕಟ್ಟೆಯ ಮುಖ್ಯರಸ್ತೆಯಲ್ಲಿಯೇ ಆಟೋ ಮೇಲೆ ಕಾಡಾನೆಗಳ ಹಿಂಡು ಧಾಳಿ ನಡೆಸಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಈ ಆನೆಗಳ ಗುಂಪನ್ನು ಸಮೀಪದ ಅರಣ್ಯಕ್ಕೆ ಅಟ್ಟಲಾಗಿದ್ದು, ಇದೀಗ ನಿಡ್ತ ಮೀಸಲು ಅರಣ್ಯಕ್ಕೆ ಒಳಪಡುವ ಬಾಣಾವರ ಅರಣ್ಯದಲ್ಲಿ ಬೀಡುಬಿಟ್ಟಿದ್ದು, ಅರಣ್ಯಕ್ಕೆ ಒತ್ತಿಕೊಂಡAತೆ ವಾಸವಿರುವ ಮಂದಿಗೆ ಜೀವಭಯ ಪ್ರಾರಂಭವಾಗಿದೆ.
ಅರಣ್ಯ ಇಲಾಖೆ ಪಟಾಕಿ ಹೊಡೆಯುವದು, ಆನೆ ಕಂದಕ ದುರಸ್ತಿಯ ನೆಪದಲ್ಲೇ ಕಾಲ ಕಳೆಯುತ್ತಿದೆ. ಅಕಸ್ಮಾತ್ ಆನೆ ಧಾಳಿಯಿಂದ ಮಾನವ ಪ್ರಾಣ ಹಾನಿಯಾದರೆ ಅರಣ್ಯ ಇಲಾಖೆ ಪರಿಹಾರ ಕೊಡುತ್ತದೆ..,ಆದರೆ ಮರಳಿ ಪ್ರಾಣ ಕೊಡುವ ಶಕ್ತಿ ಅರಣ್ಯ ಇಲಾಖೆಗೆ ಇದೆಯೇ? ಎಂಬ ಪ್ರಶ್ನೆ ಈ ಭಾಗದ ಸಾರ್ವಜನಿಕರದ್ದು.
ತಕ್ಷಣ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಅವುಗಳಿಗೆ ಅಲ್ಲಿಯೇ ಆಹಾರ ನೀರು ಒದಗಿಸಬೇಕು. ಕಾಡಾನೆಗಳ ಉಪಟಳದಿಂದ ಜನಸಾಮಾನ್ಯರನ್ನು ಪಾರು ಮಾಡಬೇಕು ಎಂದು ಐಗೂರಿನ ದಿನೇಶ್, ಕಾಜೂರಿನ ಅವಿಲಾಶ್, ಅಬ್ಬೂರುಕಟ್ಟೆಯ ತಿಮ್ಮಯ್ಯ, ಬಾಣಾವರದ ಸಂತೋಷ್ ಸೇರಿದಂತೆ ಇತರರು ಪತ್ರಿಕೆ ಮೂಲಕ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. -ವಿಜಯ್ ಹಾನಗಲ್
