ಕುಶಾಲನಗರ, ಮಾ.೧೩: ಸರಕಾರದ ನೂತನ ಕಾನೂನುಗಳನ್ನು ವಿರೋಧಿಸಿ ಕೊಡಗು ಜಿಲ್ಲೆಯಾದ್ಯಂತ ಕೊಡಗು ಕ್ರಷರ್ ಮಾಲೀಕರ ಸಂಘ ಕಲ್ಲು, ಜಲ್ಲಿ ಸಾಗಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದೆ. ಜಿಲ್ಲೆಯ ೨೦ಕ್ಕೂ ಅಧಿಕ ಕಲ್ಲು ಕ್ವಾರೆಗÀಳಲ್ಲಿ ಕೆಲಸ ನಿರ್ವಹಿಸದೆ ಬಂದ್ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಪ್ರಮುಖರಾದ ವಿ.ಎಂ. ವಿಜಯ ನೇತೃತ್ವದಲ್ಲಿ ಕ್ರಷರ್ ಮಾಲೀಕರು ಮತ್ತು ಸಂಘದ ಸದಸ್ಯರು ಕುಶಾಲನಗರ ಗಡಿಭಾಗದಲ್ಲಿ ಜಲ್ಲಿ ತುಂಬಿದ ಲಾರಿಗಳನ್ನು ತಡೆಹಿಡಿದು ವಾಪಾಸು ಕಳುಹಿಸಿದರು.ಈ ಸಂದರ್ಭ ಮಾತನಾಡಿದ ವಿಜಯ್ ತಮ್ಮ ಬೇಡಿಕೆ ಈಡೇರಿಸುವ ತನಕ ಕ್ರಷರ್ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದ್ದಾರೆ.