ಮಡಿಕೇರಿ, ಮಾ.೧೨ : ಪ್ರಸಕ್ತ ಸಾಲಿನ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ.೫೦ ರ ಸಹಾಯದನದಲ್ಲಿ ತಾಲೂಕಿನ ೧೩ ಮಂದಿ ಬೀದಿ ವ್ಯಾಪಾರಿಗಳಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರು ಹಣ್ಣು ತರಕಾರಿ ಮಾರಾಟ ಮಾಡಲು ತಳ್ಳುವ ಗಾಡಿಯನ್ನು ವಿತರಿಸಿದರು.

ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವಂತೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ನಿಂದ ಹಣ್ಣು ತರಕಾರಿ ಪಡೆದು ವ್ಯಾಪಾರ ನಡೆಸಬೇಕು. ಸರಕಾರದ ಸವಲತ್ತುಗಳನ್ನು ಸರಿಯಾಗಿ ಪ್ರಯೋಜನೆ ಪಡೆದುಕೊಳ್ಳುವಂತೆ ಜಿ.ಪಂ.ಅಧ್ಯಕ್ಷರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ, ಹಾಪ್‌ಕಾಮ್ಸ್ ನಿರ್ದೇಶಕರಾದ ತಾಕೇರಿ ಪೊನ್ನಪ್ಪ, ಮಾಚಿಮಂಡ ಸುವೀನ್ ಗಣಪತಿ, ಮನುಮಹೇಶ್, ಬೇಬಿ ಪೂವಯ್ಯ, ಕೆ.ಎಂ. ಮನೋಹರ್, ಕಾಂಗೀರ ಸತೀಶ್, ಲೀಲಾ ಮೇದಪ್ಪ, ತೋಟಗಾರಿಕೆ ಉಪ ನಿರ್ದೇಶಕ ಶಶಿಧರ್ ಎಚ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಮುತಪ್ಪ ಹಾಗೂ ತೋಟಗಾರಿಕೆ ಅಧಿಕಾರಿಗಳಾದ ವಿಜೇತ್, ಗಣೇಶ್ ಇದ್ದರು.