ಕಣಿವೆ, ಮಾ. ೧೨: ಇಲ್ಲಿಗೆ ಸಮೀಪದ ಜೇನುಕಲ್ಲುಬೆಟ್ಟದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಕೆ. ಚಂದ್ರಶೇಖರ್ ಸತತವಾಗಿ ಮೂರನೆ ಅವಧಿಗೂ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ.ಆರ್. ಜಗದೀಶ್, ನಿರ್ದೇಶಕರಾಗಿ ನಾಗರಾಜು, ಅನ್ನಮ್ಮ, ಜೋಯಪ್ಪ, ಎಸ್.ಆರ್. ಮಹೇಶ್, ಜ್ಯೋತಿ, ಶಂಕರನ್ ಹಾಗೂ ಧರ್ಮದಾಸ್ ಆಯ್ಕೆಯಾಗಿದ್ದಾರೆ. ಸಹಕಾರ ಇಲಾಖೆಯ ಎಸ್.ಎಂ. ರಘು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಎಚ್.ಎಂ. ಬಸವರಾಜು ಈ ಸಂದರ್ಭ ಇದ್ದರು.