*ಗೋಣಿಕೊಪ್ಪಲು, ಮಾ. ೧೨: ಕಾವೇರಿ ಪದವಿಪೂರ್ವ ಕಾಲೇಜು ಗೋಣಿಕೊಪ್ಪ ಮತ್ತು ಕೊಡಗು ದಂತ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಮತ್ತು ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಡಾ. ನಮಿತಾ ಉದ್ಘಾಟಿಸಿ ವಿದ್ಯಾರ್ಥಿ ಗಳಿಗೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಹಲ್ಲುಗಳು ವ್ಯಕ್ತಿಯ ಸೌಂದರ್ಯದ ಪ್ರಮುಖ ಅಂಗ. ಪ್ರಸ್ತುತ ದಿನಗಳಲ್ಲಿ ನಾವು ಸೇವಿಸತಕ್ಕಂತಹ ಆಹಾರ ಪದಾರ್ಥಗಳಲ್ಲಿ ಇರುವ ರಾಸಾಯನಿಕ ವಸ್ತುಗಳು ನಮ್ಮ ಹಲ್ಲುಗಳು ಹಾಳಾಗಲು ಕಾರಣವಾಗುತ್ತಿವೆ. ಕಾಲಕಾಲಕ್ಕೆ ತಕ್ಕಂತೆ ಹಲ್ಲುಗಳ ತಪಾಸಣೆ ನಡೆಸಿಕೊಳ್ಳುವುದು ಅವಶ್ಯಕ ಇಲ್ಲದಿದ್ದರೆ ಮುಖದ ಸೌಂದರ್ಯ ಹಾಳಾಗುವುದರೊಂದಿಗೆ, ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ ಎಸ್.ಎಸ್ ಮಾದಯ್ಯ, ಡಾ. ಆಳಮೆಂಗಡ ಸಾಂಚಿ, ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಕ್ರಂ ಹಾಜರಿದ್ದರು.