ಮಡಿಕೇರಿ, ಮಾ. ೧೨: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಡಿಕೇರಿಯ ಪೊಲೀಸ್ ಮೈದಾನ ದಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟವನ್ನು ತಾ. ೧೧ ರಂದು ಡಬ್ಬಲ್ ಒಲಿಂಪಿಯನ್ ಖ್ಯಾತಿಯ ಕೊಡಗಿನ ಕ್ರೀಡಾತಾರೆ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ಅವರು ಉದ್ಘಾಟಿಸಿದರು.
ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು - ಸಿಬ್ಬಂದಿಗಳು ಒತ್ತಡವನ್ನು ನಿವಾರಿಸುವಂತಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದು ಅವಶ್ಯ ಎಂದು ಹೇಳಿದ ಮಾಜಿ ಒಲಿಂಪಿಯನ್ ಪ್ರಮೀಳಾ ಅವರು ಉತ್ತಮ ಆರೋಗ್ಯಕ್ಕೂ ಕ್ರೀಡೆಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ನಕಾರಾತ್ಮಕ ಭಾವನೆಯನ್ನು ಬಿಟ್ಟು ಸಕಾರಾತ್ಮಕ ವಾಗಿ ಚಿಂತಿಸುವ ಮೂಲಕ ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಬೇಕು. ಇದಕ್ಕೆ ಬಡ ಕುಟುಂಬದ ಮೂಲದಿಂದ ಬಂದು ದೇಶಕ್ಕೆ ಕೀರ್ತಿ ತಂದಿರುವ ಹಿಮದಾಸ್ ಅವರಂತಹ ಕ್ರೀಡಾಪಟು ಗಳ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಶ್ರಮದಿಂದ ಮಾತ್ರ ಪ್ರತಿಫಲ ಸಾಧ್ಯ ಎಂದರು. ಮಕ್ಕಳ ಅಭಿರುಚಿಗೆ ತಕ್ಕಂತೆ ಅದನ್ನು ಅರಿತು ಪೋಷಕರು ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬರು ಶಿಸ್ತನ್ನು ಅಳವಡಿಸಿ ಕೊಂಡರೆ ಯಶಸ್ಸನ್ನು ಕಾಣಬಹುದಾಗಿದೆ ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡಾಕೂಟ ಆಯೋಜನೆ ಯ ಕುರಿತು ತಿಳಿಸಿ ಸ್ವಾಗತಿಸಿದರು. ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಬಾರಿಕೆ ದಿನೇಶ್‌ಕುಮಾರ್ ಅವರು ವಂದಿಸಿದರು.
ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗ, ಡಿಎಆರ್, ಮಹಿಳಾ ವಿಭಾಗದ ನಡುವೆ ವಿವಿಧ ಕ್ರೀಡೆಗಳು ಜರುಗಲಿವೆ. ಪೊಲೀಸ್ ಅಧಿಕಾರಿ ಗಳಿಗೆ, ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆಯಲಿದೆ. ವೈಯಕ್ತಿಕ ಸ್ಪರ್ಧೆ, ತಂಡ ಸ್ಪರ್ಧೆಗಳೂ ಸೇರಿದಂತೆ ಮೂರು ದಿನಗಳ ಕಾಲದ ವಾರ್ಷಿಕ ಕ್ರೀಡೆಯಲ್ಲಿ ಇಲಾಖಾ ಸಿಬ್ಬಂದಿಗಳು ಉತ್ಸುಕತೆಯೊಂದಿಗೆ ತೊಡಗಿಸಿಕೊಂಡಿದ್ದು, ಉದ್ಘಾಟನಾ ಸಂದರ್ಭ ವಿವಿಧ ತಂಡಗಳಿAದ ಪಥಸಂಚಲನವೂ ನಡೆಯಿತು. ತಾ. ೧೩ ರಂದು (ಇಂದು) ಸಮಾರೋಪ ಸಮಾರಂಭ ನಡೆಯಲಿದೆ.