ಗೋಣಿಕೊಪ್ಪಲು, ಮಾ. ೧೩: ಮುಂಬರುವ ಕೆಲವು ದಿನಗಳಲ್ಲಿ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ವಿವಿಧ ಪಕ್ಷಗಳಿಂದ ಬಿರುಸಿನ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರಾದ ಮೂಕಳೇರ ಸುಮಿತ ಗಣೇಶ್ ರವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೆಲಕಾಲ ಹೈಡ್ರಾಮ ನಡೆದಿದೆ.

ಶನಿವಾರ ಮಧ್ಯಾಹ್ನ ವೇಳೆ ಕಾಂಗ್ರೆಸ್ ಪಕ್ಷದ ಸುಮಿತ ಗಣೇಶ್ ಬಿಜೆಪಿ ಪಕ್ಷದ ಮುಖಂಡರಾದ ನೆಲ್ಲಿರ ಚಲನ್ ಮುಂದಾಳತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಸಹಜವಾಗಿಯೇ ಸುಮಿತ ರವರು ಗೊಂದಲಕ್ಕೀಡಾಗಿ ಬಿಜೆಪಿ ಪಕ್ಷದ ಕಚೇರಿಗೆ ತೆರಳಿ ಬಿಜೆಪಿಯ ಪಕ್ಷಕ್ಕೆ ಆತುರದಿಂದ ಸೇರ್ಪಡೆಯಾದರು. ಈ ವಿಷಯವೂ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿರು ವಂತೆಯೇ ಕಾಂಗ್ರೆಸ್ ಪಕ್ಷದ ಮುಖಂಡ ಅಜ್ಜಿಕುಟ್ಟಿರ ಪೊನ್ನಣ್ಣ ಮುಂದಾಳತ್ವದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಸುಮಿತ ಮನೆಗೆ ತೆರಳಿ ನಡೆದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ಸುಮಿತ ಗಣೇಶ್ ಆದ ಪ್ರಮಾದವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದಾಗಿ ಭರವಸೆ ನೀಡಿದರು. ಇದರಿಂದಾಗಿ ಕೆಲಕಾಲ ನಡೆದ ಗೊಂದಲ ಸುಖಾಂತ್ಯಗೊAಡಿತು.

ಈ ಸಂದರ್ಭ ಕಾಂಗ್ರೆಸ್‌ನ ಮುಖಂಡ ರಾದ ಮೀದೇರಿರ ನವೀನ್, ಮುಕ್ಕಾಟೀರ ಶಿವು ಮಾದಪ್ಪ, ಪಲ್ವಿನ್ ಪೂಣಚ್ಚ, ತೀತಿರ ಧರ್ಮಜ, ಮೂಕಳೇರ ಕುಶಾಲಪ್ಪ, ಶ್ರೀಜಾ ಶಾಜಿ ಅಚ್ಚುತ್ತನ್, ಮತ್ರಂಡ ದಿಲ್ಲು,ಕೋಳೆರ ಭಾರತಿ, ಕರ್ತಮಾಡ ರಮ್ಯ, ಆಲೀರ ರಶೀದ್, ಬಿ.ಎನ್.ಪ್ರಥ್ವಿ, ಅರವಿಂದ್ ಕುಟ್ಟಪ್ಪ, ಜೆ.ಕೆ.ಸೋಮಣ್ಣ, ಅನೀಶ್, ಅಣ್ಣಿರ ಹರೀಶ್, ಎ.ಜೆ.ಬಾಬು, ಬಾಲಕೃಷ್ಣ, ಮಂಜು ಮುಂತಾದವರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್