ಸೋಮವಾರಪೇಟೆ, ಮಾ. ೧೩: ಶಾಂತಳ್ಳಿ ಶಾಖಾ ವ್ಯಾಪ್ತಿಯ ಶಾಂತಳ್ಳಿ ಫೀಡರ್‌ನಲ್ಲಿ ಮುಂಗಾರು ಪೂರ್ವ ಮಾರ್ಗದ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ತಾ. ೧೫ ರಂದು (ನಾಳೆ) ಈ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಧನಂಜಯ್ ತಿಳಿಸಿದ್ದಾರೆ.
ತಾ. ೧೫ರ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫.೩೦ರ ವರೆಗೆ ಕಿರಗಂದೂರು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಹಾನಗಲ್ಲು (ಭಾಗಶಃ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.