ಚೆಟ್ಟಳ್ಳಿ, ಮಾ. ೧೨: ಇತೀಚೆಗೆ ಸಕಲೇಶಪುರದಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಕೊಡಗಿನ ನೆಲ್ಲಿಹುದಿಕೇರಿಯ ಧೀರಜ್ ಎರಡು ಪ್ರಶಸ್ತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕ್ರಮವಾಗಿ ೧೧೦ಸಿಸಿ ವಿಭಾಗದಲ್ಲಿ ನೊವೀಸ್ ಕ್ಲಾಸ್‌ನಲ್ಲಿ ದ್ವಿತೀಯ ಬಹುಮಾನ ಮತ್ತು ೧೧೦ಸಿಸಿ ಸಾಮಾನ್ಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ.