ಮಡಿಕೇರಿ, ಮಾ. ೧೨: ೧೯೭೧ ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಪ್ಪಾರಂಡ ಕಾರ್ಯಪ್ಪ ಪೂವಯ್ಯ ಅವರನ್ನು ಕೊಯ ಮತ್ತೂರ್ ರೋಟರಿ ಹಾಗೂ ಎನ್.ಸಿ.ಸಿ ಘಟಕದಿಂದ ಸನ್ಮಾನಿಸ ಲಾಯಿತು. ೧೯೭೧ರಲ್ಲಿ ಯುದ್ಧ ನಡೆದು ೨೦೨೧ ಕ್ಕೆ ೫೦ ವರ್ಷಗಳು ಕಳೆದಿದ್ದು ಸುವರ್ಣ ಮಹೋತ್ಸವದ ಸಮಾರಂಭ ದಲ್ಲಿ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು.. ಮೂಲತಃ ಜಿಲ್ಲೆಯ ಯವಕಪಾಡಿಯವರಾದ ಪೂವಯ್ಯ ಅವರು ದಿ. ಅಪ್ಪಾರಂಡ ಕಾರ್ಯಪ್ಪ ಅವರು ಪುತ್ರ. ೧೯೭೧ ರ ಯುದ್ಧದ ಸಂದರ್ಭ ಇವರಿಗೆ ಕೇವಲ ೨೩ ವರ್ಷಗಳಾಗಿದ್ದು, ಬಾಂಗ್ಲಾದೇಶದ ‘ಹಿಲ್ಲಿ’ ಪ್ರದೇಶವನ್ನು ಪಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.