ಮಡಿಕೇರಿ, ಮಾ. ೧೦: ಮಡಿಕೇರಿ ನಗರದ ಹೊಸ ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ಡಾಂಬರೀಕರಣಗೊಳಿಸಬೇಕೆAದು ಒತ್ತಾಯಿಸಿ ನಗರಸಭೆಯ ಮಾಜಿ ಸದಸ್ಯ ಎ.ಎಸ್. ಪ್ರಕಾಶ್ ಆಚಾರ್ಯ ಹಾಗೂ ನಗರ ಕಾಂಗ್ರೆಸ್ ಪ್ರಮುಖರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸ ಬಡಾವಣೆಯ ರಸ್ತೆಗಳ ತುಂಬಾ ಹೊಂಡ, ಗುಂಡಿಗಳಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಮಡಿಕೇರಿ, ಮಾ. ೧೦: ಮಡಿಕೇರಿ ನಗರದ ಹೊಸ ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ಡಾಂಬರೀಕರಣಗೊಳಿಸಬೇಕೆAದು ಒತ್ತಾಯಿಸಿ ನಗರಸಭೆಯ ಮಾಜಿ ಸದಸ್ಯ ಎ.ಎಸ್. ಪ್ರಕಾಶ್ ಆಚಾರ್ಯ ಹಾಗೂ ನಗರ ಕಾಂಗ್ರೆಸ್ ಪ್ರಮುಖರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸ ಬಡಾವಣೆಯ ರಸ್ತೆಗಳ ತುಂಬಾ ಹೊಂಡ, ಗುಂಡಿಗಳಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ರಸ್ತೆ ಡಾಂಬರೀಕಣ ಪೂರ್ಣಗೊಳ್ಳದೆ ಹಾಗೇ ಉಳಿದುಕೊಳ್ಳುವ ಆತಂಕವಿದೆ.
ಬಡಾವಣೆಯ ನಿವಾಸಿ ಮುತ್ತಪ್ಪ ಪೂಜಾರಿ ಅವರ ಮನೆಯ ಬಲಭಾಗದಲ್ಲಿ ಸುಮಾರು ಐದಾರು ಕುಟುಂಬಗಳ ಮನೆಗಳಿವೆ. ಆದರೆ ಇಲ್ಲಿ ಕಾಲು ದಾರಿ ಮಾತ್ರ ಇದ್ದು, ಚರಂಡಿಗೆ ಮೇಲ್ಚಾವಣಿ ಅಳವಡಿಸುವ ಮೂಲಕ ವಾಹನಗಳ ಸಂಚಾರಕ್ಕೂ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾಮುದ್ದಪ್ಪ, ಪರಿಶಿಷ್ಟ ಜಾತಿ ಘಟಕದ ನಗರಾಧ್ಯಕ್ಷ ಮುದ್ದುರಾಜು, ಪ್ರಮುಖರಾದ ಟಿ.ಪಿ. ನಾಣಯ್ಯ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.