ಗುಡ್ಡೆಹೊಸೂರು, ಮಾ. ೧೦: ಇಲ್ಲಿನ ಗ್ರಾ.ಪಂ ವ್ಯಾಪ್ತಿಯ ಮಾದಪಟ್ಟಣದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಸಲು ಶಾಸಕ ಅಪ್ಪಚ್ಚುರಂಜನ್ ಭೂಮಿಪೂಜೆ ನಡೆಸಿದರು. ಈ ಸಂದರ್ಭ ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ನಂದಿನಿ ದೇವರಾಜ್, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಪ್ರವೀಣ್, ಚಿದಾನಂದ, ಶಿವಪ್ಪ, ಗಂಗಮ್ಮ, ರುಕ್ಮೀಣಿ, ಸುಶೀಲ, ಸರ್ವಮಂಗಳ, ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಪುಷ್ಪ, ಜಿ.ಪಂ. ಸದಸ್ಯೆ ಮಂಜುಳ, ಕೂಡ ಅಧ್ಯಕ್ಷ ಚರಣ್, ಮುಖಂಡ ಶಿವ, ಎಂ.ಆರ್. ಉತ್ತಪ್ಪ, ಪಿ.ಡಿ.ಓ ಶ್ಯಾಂ, ಮತ್ತು ಇಲ್ಲಿನ ಬಿ.ಜೆ.ಪಿ ಮುಖಂಡರು ಹಾಜರಿದ್ದರು.