ಗೋಣಿಕೊಪ್ಪಲು, ಮಾ. ೧೦: ನರಭಕ್ಷಕ ಹುಲಿಯನ್ನು ಹಿಡಿಯಲು ಒತ್ತಾಯಿಸಿ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಪದಾಧಿಕಾರಿಗಳು ಬುಧವಾರ ತಮ್ಮ ಪ್ರತಿಭಟನೆಯನ್ನು ಮೈಸೂರು, ಗೋಣಿಕೊಪ್ಪ ರಾಜ್ಯ ಹೆದ್ದಾರಿ ತಡೆಯುವ ಮೂಲಕ ಹಾಗೂ ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಿದರು. ಚಳುವಳಿಯ ಸ್ಥಳವಾದ ಬೆಳ್ಳೂರು ಜಂಕ್ಷನ್‌ನಿAದ ವಾಹನದ ಮೂಲಕ ಹೊರಟ ಹೋರಾಟಗಾರರು ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪೊನ್ನಂಪೇಟೆ ಕಾನೂರು ಜಂಕ್ಷನ್‌ನಲ್ಲಿ ಸಮಾಗಮಗೊಂಡು ಇಲ್ಲಿಗೆ (ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಮಾ. ೧೦: ನರಭಕ್ಷಕ ಹುಲಿಯನ್ನು ಹಿಡಿಯಲು ಒತ್ತಾಯಿಸಿ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಪದಾಧಿಕಾರಿಗಳು ಬುಧವಾರ ತಮ್ಮ ಪ್ರತಿಭಟನೆಯನ್ನು ಮೈಸೂರು, ಗೋಣಿಕೊಪ್ಪ ರಾಜ್ಯ ಹೆದ್ದಾರಿ ತಡೆಯುವ ಮೂಲಕ ಹಾಗೂ ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಿದರು. ಚಳುವಳಿಯ ಸ್ಥಳವಾದ ಬೆಳ್ಳೂರು ಜಂಕ್ಷನ್‌ನಿAದ ವಾಹನದ ಮೂಲಕ ಹೊರಟ ಹೋರಾಟಗಾರರು ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪೊನ್ನಂಪೇಟೆ ಕಾನೂರು ಜಂಕ್ಷನ್‌ನಲ್ಲಿ ಸಮಾಗಮಗೊಂಡು ಇಲ್ಲಿಗೆ ಪೊನ್ನಂಪೇಟೆ, ಗೋಣಿಕೊಪ್ಪ ಮಾರ್ಗವಾಗಿ ಹೊರಟ ವಾಹನಗಳು ತಿತಿಮತಿ ಸಮೀಪದ ಮತ್ತಿಗೋಡುವಿನ ವನ್ಯಜೀವಿ ಅರಣ್ಯ ಕಚೇರಿಯ ಹೊರಭಾಗದ ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ಸಾಲುಸಾಲಾಗಿ ನಿಲ್ಲುವ ಮೂಲಕ ತಮ್ಮ ಪ್ರತಿಭಟನೆ ಆರಂಭಿಸಿದರು.

ಪೊನ್ನAಪೇಟೆ ಮತ್ತು ಗೋಣಿಕೊಪ್ಪಲುವಿನಲ್ಲಿ ಮಾನವ ಸರಪಳಿ ರಚಿಸಲಾಯಿತು. ಗುರುವಾರ ಪೊನ್ನಂಪೇಟೆ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ.

ಮತ್ತಿಗೋಡುವಿನ ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಚೇರಿಯ ಹೊರ ಭಾಗವಿರುವ ಗೇಟ್ ಬಳಿ ಹೋರಾಟಗಾರರನ್ನು ತಡೆಯುವ ಪ್ರಯತ್ನ ಮಾಡಿದರು. ನೂರಾರು ಪೊಲೀಸರು ಕಚೇರಿಯ ಹೊರ ಭಾಗದಲ್ಲಿ ಭಾರೀ ಭದ್ರತೆಯನ್ನು ಕಲ್ಪಿಸಿದ್ದರು. ಅರಣ್ಯ ಕಚೇರಿಗೆ ನುಗ್ಗುವ ಪ್ರಯತ್ನವನ್ನು ಹೋರಾಟಗಾರರು ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಸಂದರ್ಭ ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ವಾಗ್ಯುದ್ಧ ನಡೆಯಿತು. ಡಿವೈಎಸ್ಪಿ ಜಯಕುಮಾರ್ ಹೋರಾಟಗಾರರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರಾದರೂ ಹೋರಾಟಗಾರರು ಘೋಷಣೆಗಳನ್ನು ಕೂಗುತ್ತಾ ಅರಣ್ಯ ಅಧಿಕಾರಿಗಳು, ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಸತತವಾಗಿ ವಿಫಲ ರಾಗಿದ್ದೀರಿ, ಎಲ್ಲಾ ವ್ಯವಸ್ಥೆಗಳನ್ನು ನೀಡಿದ್ದರೂ ಹುಲಿಯನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇನ್ನೆಷ್ಟು ನರಬಲಿ ಬೇಕಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.

ಬೆಳ್ಳೂರು ಗ್ರಾಮದಲ್ಲಿ ಚೆಕ್ಕೆರ ಸೋಮಯ್ಯ ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸುಣ್ಣದ

(ಮೊದಲ ಪುಟದಿಂದ) ಬೇಗೂರು ಗ್ರಾಮದ ಕೂಲಿ ಕಾರ್ಮಿಕ ಕೆಂಚಶೆಟ್ಟಿ ಹುಲಿ ದಾಳಿಯಿಂದ ಜೀವನ್ಮರಣ ಸ್ಥಿತಿಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ೧೭ ದಿನಗಳಿಂದ ಬೆಳ್ಳೂರು ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ದಿನಕ್ಕೊಂದರAತೆ ರೈತರ ಜಾನುವಾರುಗಳು ವ್ಯಾಘ್ರನ ಪಾಲಾಗುತ್ತಿದೆ. ಇಲಾಖೆಯ ಸಿಬ್ಬಂದಿಗಳು ಹುಲಿ ಸೆರೆಗೆ ಪ್ರಯತ್ನ ಮಾಡಿದ್ದರೂ ನರಭಕ್ಷಕನ ಜಾಡು ಹಿಡಿಯುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಹುಲಿ ಸಂಚಾರದ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಬೆಂಗಳೂರಿನಿAದ ಆಗಮಿಸಿದ ಶಾರ್ಪ್ ಶೂರ‍್ಸ್ಗಳು, ಸಾಕಾನೆಯ ಸಹಕಾರದಿಂದ ಹುಲಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಹುಲಿ ಸೆರೆಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುಕೋ ಸಂಘಟನೆಯ ಜಿಲ್ಲಾಧ್ಯಕ್ಷ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ಕೊಡವ ಸಮಾಜ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮಚ್ಚಮಾಡ ಅನೀಶ್ ಮಾದಪ್ಪ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ

ಮಧ್ಯಾಹ್ನ ೧ ಗಂಟೆಯಿAದ ಗೋಣಿಕೊಪ್ಪ, ಮೈಸೂರು ರಾಜ್ಯ ಹೆದ್ದಾರಿ ತಡೆ ನಡೆಸಿದ ಹೋರಾಟಗಾರರು, ಸಂಜೆ ೫ ಗಂಟೆವರೆಗೂ ರಸ್ತೆ ತಡೆ ಮುಂದುವರಿಸಿದರು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಬೇಕು, ಹುಲಿ ಕಾರ್ಯಾಚರಣೆ ಬಗ್ಗೆ ಹೋರಾಟಗಾರರಿಗೆ ಮಾಹಿತಿ ನೀಡಬೇಕು ಇಲ್ಲದಿದ್ದಲ್ಲಿ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಪದೆ, ಪದೇ ಕೇಳಿಕೊಂಡರೂ ಹುಲಿ ಕಾರ್ಯಾಚರಣೆ ಸ್ಥಳದಿಂದ ಹಿರಿಯ ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಆಗಮಿಸಲು ಹಿಂದೇಟು ಹಾಕಿದರು. ಡಿಎಫ್‌ಓ ಚಕ್ರಪಾಣಿ ಅವರನ್ನು ಅಹವಾಲು ಸ್ವೀಕರಿಸಲು ಕಳುಹಿಸಿದರು. ಇದರಿಂದಾಗಿ ರೈತರ ತಾಳ್ಮೆ ಕಟ್ಟೆಯೊಡೆಯಿತು. ಅಪಾರ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಒಮ್ಮೆಲೇ ಅರಣ್ಯ ಇಲಾಖೆಯ ಕಚೇರಿಯ ಗೇಟ್‌ನ ಬಳಿ ಜಮಾಯಿಸಿ ಕಚೇರಿಗೆ ನುಗ್ಗುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ಮಾಡಿದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ಯುದ್ಧ ನಡೆಯಿತು.

ಮಧ್ಯ ಪ್ರವೇಶ ಮಾಡಿದ ಡಿವೈಎಸ್ಪಿ ಜಯಕುಮಾರ್ ಸಮಾಧಾನ ಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾದರು. ಅರಣ್ಯ ಅಧಿಕಾರಿಗಳ ಮೇಲೆ ಕೆಲವರು ಏಕವಚನ ಪ್ರಯೋಗ ಮಾಡಿದರು.

ಮತ್ತಿಗೋಡು ಅರಣ್ಯ ಕಚೇರಿಯ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜೀ ಅರಣ್ಯ ನಿಗಮದ ಉಪಾಧ್ಯಕ್ಷ ಮಾಂಗೇರ ಪದ್ಮಿನಿ ಪೊನ್ನಪ್ಪ, ಪೊನ್ನಂಪೇಟೆ ನಾಗರಿಕ ವೇದಿಯ ಪ್ರಮುಖರಾದ ಮೂಕಳೇರ ಕುಶಾಲಪ್ಪ, ಆಲೀರ ಎರ್ಮುಹಾಜಿ, ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಪುಚ್ಚಿಮಾಡ ಅಶೋಕ್, ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ, ಅಪ್ಪಚಂಗಡ ಮೋಟಯ್ಯ, ಮುಂತಾದವರು ಮಾತನಾಡಿ ಹುಲಿ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡು ಕೂಡಲೇ ಹುಲಿಯನ್ನು ಕೊಂದು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆ ಇದ್ದ ಕಾರಣ ತಿತಿಮತಿ, ಪಾಲಿಬೆಟ್ಟ ಮಾರ್ಗವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ರಸ್ತೆಯಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ತಮ್ಮ ವಾಹನಗಳಲ್ಲಿ ರೈತರು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಕಿಗ್ಗಟ್ಟುನಾಡು ನಾಡು ಸಮಿತಿಯ ಅಧ್ಯಕ್ಷರಾದ ಕಾಟಿಮಾಡ ಜಿಮ್ಮಿಅಯ್ಯಣ್ಣ, ಪೊನ್ನಂಪೇಟೆ ನಾಗರಿಕ ವೇದಿಕೆಯ ಆಲೀರ ಎರ್ಮು ಹಾಜಿ, ಜಿ.ಪಂ. ಸದಸ್ಯರಾದ ಕೇಚಮಾಡ ಸರಿತಾ ಪೂಣಚ್ಚ, ಶ್ರೀಜಾ ಶಾಜಿ ಅಚ್ಚುತ್ತನ್, ಕಾಂಗ್ರೆಸ್ ಮುಖಂಡರಾದ ಆಪಟ್ಟಿರ ಟಾಟು ಮೊಣ್ಣಪ್ಪ, ವಿಲ್ಸನ್, ಶಿವಕುಮಾರ್, ಮೀದೇರಿರ ನವೀನ್, ವಿನಯ್ ಕುಮಾರ್, ಮೂಕಳೇರ ಕುಶಾಲಪ್ಪ, ಮೂಕಳೇರ ಸುಮಿತ ಗಣೇಶ್, ಚೊಟ್ಟೆಕಾಳಪಂಡ ಉದಯ, ಬಾಲಕೃಷ್ಣ, ಕಡೇಮಾಡ ಕುಸುಮ, ರೈತ ಮುಖಂಡರಾದ ಕಾಡ್ಯಮಾಡ ಉದಯ, ಮೇಚಂಡ ಕಿಶ, ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಆಶೋಕ್, ಇಟ್ಟಿರ ಸಭಿತ ಭೀಮಯ್ಯ, ಚೊಟ್ಟೆಕಾಳಪಂಡ ಮನು ಸೇರಿದಂತೆ ಆನೇಕ ಮುಖಂಡರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಚೊಟ್ಟೆಕಾಳಪಂಡ ಮನು, ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಸುನೀಲ್, ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಅಶೋಕ್, ರೈತ ಸಂಘದ ಕಾನೂನು ಸಲಹೆಗಾರ ವಕೀಲರಾದ ಹೇಮಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮುಖಂಡರಾದ ಚೆಕ್ಕೆರ ವಾಸು ಕುಟ್ಟಪ್ಪ, ಪ್ರಮುಖರಾದ ಕಳ್ಳಿಚಂಡ ರಾಬಿನ್, ಪುಚ್ಚಿಮಾಡ ಬಿದ್ದಪ್ಪ, ಅಜ್ಜಮಾಡ ಚಿಮ್ಮತಿಮ್ಮಯ್ಯ, ಕರ್ತಮಾಡ ವಿವೇಕ್, ಸೇರಿದಂತೆ ರೈತ ಸಂಘದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ, ರಾಮರೆಡ್ಡಿ, ಶ್ರೀಧರ್, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪೊಲೀಸರು ಭದ್ರತಾಕಾರ್ಯ ನಿರ್ವಹಿಸಿದರು.