ಕೂಡಿಗೆ, ಮಾ.೧೦: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ- ಸಿದ್ದಲಿಂಗಪುರ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ತಾ. ೧೧ ರಂದು ಮಹಾಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ. ಇದರ ಅಂಗವಾಗಿ ೧೧೦೮ ಎಳನೀರು ಅಭಿಷೇಕ ಮಹಾಗಣಪತಿ ಹೋಮ, ಅಷ್ಟಯಾಮ ಪೂಜೆ, ರುದ್ರಹೋಮ ತೀರ್ಥಸ್ನಾನ, ಸೇರಿದಂತೆ ವಿಶೇಷವಾದ ಪೂಜೆ, ಅನ್ನಪ್ರಸಾದ ವಿತರಣೆ ನೆರವೇರಲಿದೆ.