ಕುಶಾಲನಗರ, ಮಾ. ೧೦: ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೧ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತೃತೀಯ ಬಿ.ಎ ವಿದ್ಯಾರ್ಥಿನಿ ಎಂ.ಎಸ್ ಸೌಮ್ಯ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡರು. ತರಗತಿ ಪ್ರತಿನಿಧಿಗಳಿಂದ ಗೌಪ್ಯ ಮತದಾನ ಮೂಲಕ ಆಯ್ಕೆಯಾದ ೫ ವರ್ಷದ ಕಾಲೇಜಿನ ಇತಿಹಾಸದಲ್ಲೇ ವಿದ್ಯಾರ್ಥಿ ಸಂಘದ ಮೊಟ್ಟಮೊದಲ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ. ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ರೋಷನ್ ಅಯ್ಕೆಯಾಗಿದ್ದಾರೆ. ಈ ಚುನಾವಣಾ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೋ. ಹೆಚ್.ಬಿ ಲಿಂಗಮೂರ್ತಿ ಮಾರ್ಗದರ್ಶನ ಮೂಲಕ ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ.ಬಿ.ಡಿ ಹರ್ಷ ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿ ಸಂಚಾಲಕಿ ವಸಂತಕುಮಾರಿ, ಸಿ.ಪುಟ್ಟರಾಜ್, ಜಿ.ಎಸ್ ಚಂದ್ರಶೇಖರ್, ನಂಜುAಡ ಸ್ವಾಮಿ, ಟಿ.ಎಲ್.ತ್ಯಾಗರಾಜ್ ಹಾಗೂ ತರಗತಿ ಪ್ರತಿನಿಧಿಗಳು ಇದ್ದರು.