ಕೂಡಿಗೆ, ಮಾ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸಿದ್ದಲಿಂಗಪುರ ಸಮೀಪದ ಅರಿಸಿನಗುಪ್ಪೆ ತಂಡ ಪ್ರಥಮ ಸ್ಥಾನÀ ಪಡೆದು ಟ್ರೋಫಿ ಮತ್ತು ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಕಾಳಿಕಾಂಬ ತಂಡ ಪಡೆಯಿತು. ತೃತೀಯ ಸ್ಥಾನ ಭುವನಗಿರಿ ರಾಯಲ್ ತಂಡ, ನಾಲ್ಕನೇ ಸ್ಥಾನ ಗಿರೀಶ್ ಫ್ರೆಂಡ್ಸ್ ತಂಡ ತನ್ನದಾಗಿಸಿಕೊಂಡಿತು.

ಬಹುಮಾನ ವಿತರಣೆಯನ್ನು ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ವಿತರಣೆ ಮಾಡಿದರು. ವೇದಿಕೆಯ ಅಧ್ಯಕ್ಷತೆಯನ್ನು ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐ.ಬಿ. ಶರತ್ ವಹಿಸಿದ್ದರು. ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಸತೀಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ ಸೇರಿದಂತೆ ಗ್ರಾಮದ ಪ್ರಮುಖರು, ಸಂಘದ ಸರ್ವ ಸದಸ್ಯರು ಹಾಜರಿದ್ದರು.