ಗೋಣಿಕೊಪ್ಪಲು, ಮಾ. ೧೦: ಪದವಿಪೂರ್ವ ಶಿಕ್ಷಣ ಇಲಾಖೆ, ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಭೌತಶಾಸ್ತç ಹಾಗೂ ರಸಾಯನ ಶಾಸ್ತç ಪುನಶ್ಚೇತನ ಕಾರ್ಯಾಗಾರವು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಿ.ಹರೀಶ್ ತಾಮನ್‌ಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ಸಂಘಟಕರಾಗಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಭೌತಶಾಸ್ತç ಉಪನ್ಯಾಸಕಿ ಮಾಲತಿ ಹಾಗೂ ರಸಾಯನ ಶಾಸ್ತç ಉಪನ್ಯಾಸಕ ರವಿಶಂಕರ್ ಭಾಗವಹಿಸಿದ್ದರು.

ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಲಿಕಾ ಶಕ್ತಿ ಹೆಚ್ಚಾಗಲು ಅನುಕೂಲವಾಗಲಿದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ನುಡಿಯಲ್ಲಿ ತಿಳಿಸಿದರು. ಇದರಿಂದಾಗಿ ಕಾಲೇಜುಗಳಿಗೆ ಉತ್ತಮ ಫಲಿತಾಂಶ ಲಭಿಸುವುದಲ್ಲದೆ ರಾಜ್ಯದಲ್ಲೇ ಕೊಡಗು ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಅವಕಾಶವು ಲಭಿಸಲಿದೆ ಈ ನಿಟ್ಟಿನಲ್ಲಿ ಉಪನ್ಯಾಸಕರು ಹೆಚ್ಚಿನ ಆಸಕ್ತಿ ವಹಿಸುವಂತೆ ತಿಳಿಸಿದರು.

ಜಿಲ್ಲೆಯ ವಿವಿಧ ಕಾಲೇಜಿನ ಭೌತಶಾಸ್ತç, ರಸಾಯನಶಾಸ್ತç ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿದ್ಯಾನಿಕೇತನ ಕಾಲೇಜಿನ ಜೀವಶಾಸ್ತç ಉಪನ್ಯಾಸಕ ರಘುನಾಥ್ ಸ್ವಾಗತಿಸಿದರು. ಉಪನ್ಯಾಸಕಿ ಪದ್ಮಾವತಿ ವಂದಿಸಿದರು.