ಶನಿವಾರಸAತೆ, ಮಾ. ೧೦: ಕೊಡ್ಲಿಪೇಟೆ ಸಮೀಪದ ಕಟ್ಟೆಪುರ ಗ್ರಾಮದ ಪರಮೇಶ ಎಂಬವರ ಮನೆಯಿಂದ ೧೪ ಚೀಲ ಕಾಫಿ ಬೇಳೆ, ಅಂದಾಜು ರೂ. ೧ ಲಕ್ಷ ಬೆಲೆ ಬಾಳುವ ಕಾಫಿ ಕಳುವಾಗಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಟ್ಟೆಪುರ ಗ್ರಾಮದ ಧನಂಜಯ, ಮಂಜ, ಶಿವ ಬಂಧಿತ ಆರೋಪಿಗಳು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಹಾಯಕ ಠಾಣಾಧಿಕಾರಿ ಶಿವಲಿಂಗ, ಅಪರಾಧ ವಿಭಾಗದ ಲೋಕೇಶ್, ಮುರುಳಿ, ಶಫೀರ್, ಹರೀಶ್, ಪ್ರದೀಪ್, ಧನಂಜಯ, ಕೊಡ್ಲಿಪೇಟೆ ಉಪಠಾಣೆಯ ಎಎಸ್ಐ ಕೃಷ್ಣೇಗೌಡ, ಸಿಬ್ಬಂದಿಗಳಾದ ಡಿಂಪಲ್, ಪರಮೇಶ ಭಾಗವಹಿಸಿದ್ದರು.