ಮುಳ್ಳೂರು/ಆಲೂರುಸಿದ್ದಾಪುರ, ಮಾ ೧೦: ‘ಕೇಂದ್ರ ಸರಕಾರದ ರಾಸಾಯನಿಕ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ರೈತರು ತಮ್ಮ ಕೃಷಿ ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಸಾವಯವ ಕೃಷಿ ಪದಾರ್ಥ ಬಳಸುವ ಮೂಲಕ ಭೂಮಿಯ ನೈಸರ್ಗಿಕ ಫಲವತ್ತತೆ ಮತ್ತು ಸಾವಯವ ಬಳಕೆಯಿಂದ ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿರಿ’ ಎಂದು ಆಯ್ಡ್ ಶಾಪ್ ಪ್ರೊಮೋಷನ್ ಸಂಸ್ಥೆಯ ಮೈಸೂರು-ಕೊಡಗು ವಿಭಾಗದ ನಿರ್ದೇಶಕ ಮೂರ್ತಿ ಕೆಂಪಣ್ಣ ಅಭಿಪ್ರಾಯಪಟ್ಟರು.

ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ರಾಸಾಯನಿಕ ಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಮಾನ್ಯತೆ ಪಡೆದ ಆಯ್ಡ್ ಶಾಪ್ ಪ್ರೊಮೋಷನ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿಯಲ್ಲಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ರಾಸಾಯನಿಕ ಗೊಬ್ಬರ ನಾನಾ ತರದ ರಾಸಾಯನಿಕ ಔಷಧಿ ಸಿಂಪಡಣೆಯಿAದ ಕೃಷಿ ಉತ್ಪನ್ನಗಳು ಹೆಚ್ಚಾಗುತ್ತಿದ್ದರೂ ಇವುಗಳನ್ನು ಸೇವಿಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೇಂದ್ರ ಸರಕಾರ ರಾಸಾಯನಿಕ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಮೂಲಕ ರೈತರು ಪ್ರತಿಯೊಂದು ಕೃಷಿ ಬೆಳೆಗಳನ್ನು ಸಾವಯವ ಗೊಬ್ಬರ ಮತ್ತು ಸಾವಯವ ಪದಾರ್ಥಗಳನ್ನು ಬಳಸುವಂತೆ ಸಾವಯವ ಕೃಷಿಗೆ ಪ್ರತ್ಯೇಕ ಯೋಜನೆ ರೂಪಿಸಿದೆ ಎಂದರು.

ಮುAದಿನ ಅವಧಿಯಲ್ಲಿ ಪ್ರಾರಂಭ ದಿಂದಲೆ ಸಾವಯವ ಗೊಬ್ಬರ, ಔಷಧಿ, ಮಣ್ಣಿನಲ್ಲಿ ಫಲವತ್ತತೆ ವೃದ್ಧಿಯಾಗಲು ಸಾವಯವ ಔಷಧಿ ಮುಂತಾದ ದೇಶಿಯ ಸಾವಯವ ಪದಾರ್ಥಗಳನ್ನು ಬಳಸಿದರೆ ೨ ವರ್ಷದಲ್ಲೆ ರೈತರ ಕೃಷಿ ಭೂಮಿ ಸಾವಯವ ಪದ್ಧತಿಗೆ ಹೊಂದಿ ಕೊಳ್ಳುತ್ತದೆ ಎಂದರು. ಸಾವಯವ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಆಯ್ಡ್ ಶಾಫ್ ಪ್ರಮೋಷನ್ ಸಂಸ್ಥೆಯ ಸ್ಥಾಪಕರು ಸಾವಯವ ಕೃಷಿ ಸಂಶೋಧನೆ ಮಾಡಿ ಯಶಸ್ಸುಗಳಿಸಿ ಈ ಸಂಸ್ಥೆಯ ಸಾವಯವ ಪದಾರ್ಥ ವಿದೇಶಗಳಿಗೆ ರಫ್ತಾಗುತ್ತಿರುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕೇಂದ್ರ ಸರಕಾರ ಸಾವಯವ ಪದಾರ್ಥಗಳ ಉತ್ಪನ್ನ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿರುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.

ಕೃಷಿಕ ನಾಪಂಡ ಮುತ್ತಪ್ಪ ಮಾತನಾಡಿ, ರಾಸಾಯನಿಕ ಕೃಷಿ ಬಳಕೆಯಿಂದ ರೈತರು ಮತ್ತು ಕೃಷಿ ಕಾರ್ಮಿಕರ ಆರೋಗ್ಯ ಹಾಳಾಗುತ್ತಿರು ವುದರ ಜೊತೆಯಲ್ಲಿ ರಾಸಾಯನಿಕ ಮಿಶ್ರಣದ ಆಹಾರ ಪದಾರ್ಥ ಸೇವನೆಯಿಂದ ಜನರು ಚಿಕ್ಕ ವಯಸಿಗೆ ನಾನಾ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು. ಸರಕಾರ ಸಾವಯವ ಕೃಷಿಗೆ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಸಾವಯವ ಪದಾರ್ಥಗಳ ಉತ್ಪನ್ನ ಸಂಸ್ಥೆಗಳು ಕಳಪೆ ಪದಾರ್ಥಗಳು ಉತ್ಪಾದÀನೆ ಆಗದಂತೆ ಕೇಂದ್ರ ಸರಕಾರಕ್ಕೆ ಒಳಪಡುವ ಸಂಸ್ಥೆಗಳು ನೋಡಿ ಕೊಳ್ಳಬೇಕು. ರೈತರ ಬಳಿಗೆ ಹೋಗಿ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಸಂಸ್ಥೆಯ ಹಿರಿಯ ನಿರ್ದೇಶಕ ಸಂತೋಷ್ ಅವರು ಈ ಕುರಿತು ಮಾಹಿತಿಯಿತ್ತರು. ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎ.ಎಸ್. ರಾಮಣ್ಣ, ಬಾಲಜಿ ಟ್ರೇರ‍್ಸ್ ಮಾಲೀಕ ಕೆ.ವಿ. ಜಯಕುಮಾರ್, ಆರ್.ಎಂ.ಸಿ. ಅಧ್ಯಕ್ಷ ಎ.ಜೆ. ವಿಜಯ್, ಆಲೂರುಸಿದ್ದಾಪುರ ಭಾಗದ ಅಯ್ಡ್÷್ಸ ಶಾಫ್ ಪ್ರೋಮೊಷನ್ ಏಜನ್ಸಿ ಹೆಚ್.ಕೆ. ಶಿವಪ್ರಕಾಶ್, ಸ್ಥಳೀಯ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಮದನ್‌ಪ್ರಿಯಾ ಪ್ರಮುಖ ಎಂ.ಆರ್. ರಾಜು ಮುಂತಾದವರಿದ್ದರು.