ಮಡಿಕೇರಿ, ಮಾ. ೯ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ೨೦೧೩-೧೪ ನೇ ಸಾಲಿನಿಂದ ಇದುವರೆಗೂ ವಿವಿಧ ಯೋಜನೆಗಳಡಿಯಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳು ಸಾಲವನ್ನು ಪಡೆದಿದ್ದು, ನಿಗಮಕ್ಕೆ ಮರುಪಾವತಿ ಮಾಡಬೇಕಾಗಿದ್ದು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು ಅವರು ಮಾರ್ಚ್-೨೦೨೧ ರ ಮಾಹೆಯಲ್ಲಿ ವಿಶೇಷ ಮರುಪಾವತಿ ಅಭಿಯಾನ ಕೈಗೊಳ್ಳಲಿದ್ದು ಸಾಲ ಪಡೆದಿರುವ ಫಲಾನುಭವಿಗಳು ಸಾಲ ಮರುಪಾವತಿ ಮಾಡುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.