ಮಡಿಕೇರಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಮಕ್ಕಳ, ಮಹಿಳೆಯರ, ಬಡವರ, ಹಿಂದುಳಿದವರ ಪರ ಇದೆ. ಜೊತೆಗೆ ಯಾವುದೇ ಹೊರೆ ನೀಡದೆ ಉತ್ತಮ ಬಜೆಟ್ ಮಂಡಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಜಿಲ್ಲೆಗೆ ರೂ ೮ ಕೋಟಿ ವೆಚ್ಚದಲ್ಲಿ ಪೊಲೀಸ್ ಸಂಕೀರ್ಣ ನಿರ್ಮಾಣದ ಘೋಷಣೆ ಮಾಡಿದೆ. ಕೊಡಗಿಗೆ ಘೋಷಣೆಯಾಗಿದ್ದ ರೂ. ೧೦೦ ಕೋಟಿ ಪೈಕಿ ಬಿಡುಗಡೆಯಾಗಬೇಕಾದ ಬಾಕಿ ರೂ. ೪೦ ಕೋಟಿ ಹಣವನ್ನು ಮಂಜೂರು ಮಾಡಲು ಮುಂದಾಗಿದೆ. ಇದಲ್ಲದೆ ಮಹಿಳೆಯರ ಸಬಲೀಕರಣಕ್ಕೆ ಹತ್ತು ಹಲವು ಕಾರ್ಯಕ್ರಮ ಜಾರಿ ಮಾಡಿರುವುದು ಶ್ಲಾಘನೀಯ. ಪ್ರಸ್ತುತ ಪರಿಸ್ಥಿತಿಯ ನಡುವೆ ಸಾವಿರಾರು ಕೋಟಿ ಹಣವನ್ನು ವಿವಿಧ ನಿಗಮಕ್ಕೆ ನೀಡಲಾಗುತ್ತಿದೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಮೀಸಲಿಡುವ ಸೀಟ್‌ಗಳನ್ನು ಶೇ. ೫೦ಕ್ಕೆ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯ ಸರಕಾರದ ಬಜೆಟ್ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿದೆ.

ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್: ಮಹೇಶ್ ಜೈನಿ

ಮಡಿಕೇರಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸಕ್ತ ಸಾಲಿನಲ್ಲಿ ಮಂಡಿಸಿದ ಬಜೆಟ್ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಂತಿದೆ ಎಂದು ಜಿಲ್ಲಾ ಬಿ.ಜೆ.ಪಿ ವಕ್ತಾರ ಮಹೇಶ್ ಜೈನಿ ಬಣ್ಣಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಪರಿಸ್ಥಿತಿಯ ನಡುವೆ ಮುಖ್ಯಮಂತ್ರಿಗಳು ಉತ್ತಮ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ರೂಪಿಸಿ ೬೦ ಸಾವಿರ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಎಲ್ಲಾ ವಲಯಕ್ಕೂ ಪ್ರಾತಿನಿಧ್ಯ ನೀಡಲಾಗಿದೆ.

ಅಯೋಧ್ಯೆಯಲ್ಲಿ ಕರ್ನಾಟಕದ ಯಾತ್ರಿ ಭವನ ನಿರ್ಮಾಣಕ್ಕೆ ರೂ ೫ ಕೋಟಿ, ಪ್ರವಾಸೋದ್ಯಮಕ್ಕೆ ೫೦೦ ಕೋಟಿ, ಎಲ್ಲಾ ನಿಗಮಗಳಿಗೆ