ಮಡಿಕೇರಿ, ಮಾ. ೯: ಜಿಲ್ಲೆಯಲ್ಲಿ ಅರಣ್ಯ ಭಾಗ, ಕಾಫಿ ತೋಟ ಹಾಗೂ ಇತರೆಡೆಗಳಲ್ಲಿ ಕಂಡು ಬರುತ್ತಿರುವ ಹುಲಿ ದಾಳಿ ಸೇರಿದಂತೆ ವನ್ಯ ಪ್ರಾಣಿಗಳಿಂದ ಆಗುತ್ತಿರುವ ಅಪಾಯವನ್ನು ತಡೆಗಟ್ಟುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ (ಕೊಡಗು ವನ್ಯಜೀವಿ ಸಂರಕ್ಷಣಾ ಸಂಘ) ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘದ ಆಡಳಿತ ಮಂಡಳಿ ಹುಲಿ ದಾಳಿ ಹೆಚ್ಚಾಗುತ್ತಿದ್ದು, ಜನರ ಪ್ರಾಣ ಹಾಗೂ ಪ್ರಾಣಿಗಳ ಮೇಲೂ ಅಪಾಯ ಎದುರಾಗುತ್ತಿದೆ. ಇದರ ರಕ್ಷಣೆಯು ಅರಣ್ಯ ಇಲಾಖೆಯದ್ದಾಗಿದೆ. ಹುಲಿಯನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯದಿಂದ ಹಿಡಿದು ಪ್ರತಿ ಸಮಸ್ಯೆಯನ್ನು ಇಲಾಖೆಯೇ ನಿರ್ವಹಿಸಬೇಕಿದೆ. ಇದರಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಗೆ ಯಾವುದೇ ಸಂಬAಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.