ಕೂಡಿಗೆ, ಮಾ. ೯: ಕುಶಾಲನಗರ ಹೋಬಳಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೂ. ೧.೪೦ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.
ಈ ಸಂದರ್ಭ ಕೂಡಾ ಅಧ್ಯಕ್ಷ ಎಂ.ಎA. ಚರಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಶ್ರೀನಿವಾಸ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು ಉಪಾಧ್ಯಕ್ಷೆ ಜಯಮ್ಮ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮತ್ತಿತರರು ಇದ್ದರು.ಸಿದ್ದಾಪುರ, ಮಾ. ೯: ಗುಹ್ಯ ಗ್ರಾಮದಲ್ಲಿ ಎಸ್.ಬಿ ಪ್ರತೀಶ್ ಎಂಬವರು ಉಚಿತವಾಗಿ ನೀಡಿರುವ ಜಾಗದಲ್ಲಿ ರೂ. ೧೬ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಟ್ಯಾಂಕನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಸ್ಥಳ ದಾನಿ ಎಸ್.ಬಿ. ಪ್ರತೀಶ್, ಅರುಣ್ ಮೊಣ್ಣಪ್ಪ, ಗ್ರಾ.ಪಂ. ಸದಸ್ಯರುಗಳಾದ ಎಂ.ಎ. ಆನಂದ, ಪೂರ್ಣಿಮಾ ರವಿ, ಅಭಿತ ಗಿರೀಶ್, ಲೋಕೇಶ್, ಪ್ರೇಮ ಇನ್ನಿತರರು ಹಾಜರಿದ್ದರು.ಸುಂಟಿಕೊಪ್ಪ, ಮಾ. ೯: ಜಲ ಜೀವನ ಯೋಜನೆಯಡಿಯಲ್ಲಿ ಮನೆ-ಮನೆ ನಲ್ಲಿ ನೀರು ಸಂಪರ್ಕಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫೩೪ ಮನೆಗಳಿಗೆ ಒಟ್ಟು ರೂ. ೧೨೩.೪ ಲಕ್ಷ ವೆಚ್ಚದ ಮನೆಮನೆ ನಲ್ಲಿ ನೀರು ಸಂಪರ್ಕಕ್ಕೆ ಚಾಲನೆ ನೀಡಲಾಯಿತು.
ನಂತರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜನರ ಬಗ್ಗೆ ಕಾಳಜಿ ವಹಿಸಿರುವ ಸರ್ಕಾರ ಹಲವಾರು ಸವಲತ್ತುಗಳನ್ನು ಒದಗಿಸಿದೆ. ಕೊಡಗಿನಲ್ಲಿ ಸುಮಾರು ೫೯ ಸಾವಿರ ಮನೆಗಳಿಗೆ ಮೂರು ನಲ್ಲಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಭೂಮಿಪೂಜೆ ನಡೆಸಲಾಗಿದೆ ಎಂದರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ೧೦೨೧ ಮನೆಗಳಿಗೆ ನಲ್ಲಿ ನೀರು ಸಂಪರ್ಕ ರೂ. ೧.೨೦ ಲಕ್ಷ ವೆಚ್ಚದಲ್ಲಿ ನಡೆಯಲಿದ್ದು, ಚಾಲನೆ ದೊರೆಯಿತು. ಅದೇ ರೀತಿ ಕೆದಕಲ್ ಗ್ರಾಮ ವ್ಯಾಪ್ತಿಯ ಕೆದಕಲ್ ಬಸ್ ನಿಲ್ದಾಣದ ಬಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಕೆ. ವಿಸ್ಮಿತ, ಉಪಾಧ್ಯಕ್ಷ ಎಂ.ಎA. ಪೊನ್ನಪ್ಪ, ಸದಸ್ಯರುಗಳಾದ ಬಿದ್ದಪ್ಪ, ಶಿವಪ್ರಸಾದ್, ಹೆಚ್.ಎ. ಆನಂದ, ಅಮ್ಮಣಿ, ಪಾರ್ವತಿ, ಪುಷ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಯು.ಎಂ. ಸೋಮಯ್ಯ, ಶಶಿಕಾಂತ ರೈ, ದಾಸಂಡ ರಮೇಶ್ ಪಿಡಿಓ ರಾಜಶೇಖರ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಸದಸ್ಯೆ ನಾಗರತ್ನ ಮತ್ತಿತರರು ಇದ್ದರು.*ಗೋಣಿಕೊಪ್ಪಲು, ಮಾ. ೯: ಶಿಕ್ಷಣದಿಂದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಹೊಂದಬಹುದಾಗಿದ್ದು, ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ತಿತಿಮತಿ, ಮರೂರು ಆಶ್ರಮ ಶಾಲೆಯ ನೂತನ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮರೂರು ಆಶ್ರಮ ಶಾಲೆಯ ನೂತನ ಕೊಠಡಿಗೆ ೩೦ ಲಕ್ಷ ಅನುದಾನವನ್ನು ನೀಡಲಾಗಿದೆ. ಅಲ್ಲದೇ ಕೋತೂರು ಆಶ್ರಮ ಶಾಲೆಗೆ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣಕ್ಕೆ ೧೦ ಲಕ್ಷ, ಗೋಣಿಗದ್ದೆ ಆಶ್ರಮ ಶಾಲೆಯ ಮೇಲ್ಚಾವಣಿೆ ದುರಸ್ಥಿಗೆ ೩ ಲಕ್ಷ ಸೇರಿದಂತೆ ಒಟ್ಟು ೪೩ ಲಕ್ಷ ಅನುದಾನವನ್ನು ಆಶ್ರಮ ಶಾಲೆಯ ಉನ್ನತೀಕರಣ ಕಾಮಗಾರಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಕೆ. ಆಶಾ, ಉಪಾಧ್ಯಕ್ಷೆ ವಿಜಯ, ಸದಸ್ಯರುಗಳಾದ ಅನೂಪ್‌ಕುಮಾರ್, ಶಂಕರ್, ಚಂದ್ರಶೇಖರ್, ಶ್ಯಾಮಲ, ಚುಬ್ರು, ದೇವರಪುರ ಗ್ರಾ.ಪಂ. ಸದಸ್ಯ ಹೆಚ್.ಯು ಮಣಿಕಂಠ, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ನಿರ್ದೇಶಕಿ ಮಂಜುಳಾ, ಪ್ರಮುಖರಾದ ಎಂ.ಎನ್. ಕೃಷ್ಣ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗುರುಶಾಂತಪ್ಪ ಹಾಗೂ ಆಶ್ರಮ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ಗುತ್ತಿಗೆದಾರರು ಹಾಜರಿದ್ದರು.