ವೀರಾಜಪೇಟೆ, ಮಾ. ೯: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ನವಗ್ರಹ ಮತ್ತು ಶನೀಶ್ವರ ದೇವಾಲಯದಲ್ಲಿ ವರ್ಷಂಪ್ರತಿಯAತೆ ತಾ. ೧೧ ರಂದು ಮಹಾಶಿವರಾತ್ರಿ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಅಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಪದ್ಧತಿಯ ವಿವಿಧ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು, ನವಗ್ರಹ ಮತ್ತು ಶನೀಶ್ವರನಿಗೆ ವಿವಿಧ ರೀತಿಯ ಅಭಿಷೇಕಗಳು ಜರುಗಲಿವೆ. ಅಪರಾಹ್ನ ೧೨.೩೦ ಗಂಟೆಗೆ ಮಹಾಪೂಜಾ ಸೇವೆ ೧ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮವಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಚೋಕಂಡ ರಮೇಶ್ ತಿಳಿಸಿದ್ದಾರೆ.