ರೋಗ ಹರಡುವ ಭೀತಿ
ಸುಂಟಿಕೊಪ್ಪ, ಮಾ. ೬: ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಪಾನಿಪೂರಿ ಅಂಗಡಿ, ಗಂಜಿ ಕೇಂದ್ರ, ತರಕಾರಿ ಅಂಗಡಿಗಳಿದ್ದು, ಇದರ ಸಮೀಪದ ಚರಂಡಿಯಲ್ಲಿ ಒಂದು ವಾರದಿಂದ ಹೆಗ್ಗಣಗಳು ಮಣ್ಣು ಕೊರೆದು ರಾಶಿಯಾಗಿದ್ದು ಪಂಚಾಯಿತಿಯವರು ತೆರವುಗೊಳಿಸದೆ ಇರುವುದರಿಂದÀ ಮೇಲ್ಭಾಗ ವಾಸದ ಮನೆಗಳಿಂದ ತ್ಯಾಜ್ಯ ನೀರು ಹರಿದು ಬಂದು ಇಲ್ಲಿ ಶೇಖರಣೆಗೊಂಡು ಗಬ್ಬೆದ್ದು ನಾರುತ್ತಿದೆ. ಹಲವಾರು ರೋಗಗಳಿಗೆ ಆಹ್ವಾನಿಸುವಂತಾಗಿದೆ.
ಭಾನುವಾರ ಸಂತೆ ದಿನ ಇದರ ಸಮೀಪದಲ್ಲಿ ಸಂತೆ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಗ್ರಾಮ ಪಂಚಾಯಿತಿಯಿAದ ಕನಿಷ್ಟ ವಾರಕ್ಕೊಮ್ಮೆಯಾದರೂ ಚರಂಡಿ ಶುಚಿಕಾರ್ಯ ನಡೆಯುತ್ತಿಲ್ಲ. ನೂತನ ಆಡಳಿತ ಮಂಡಳಿ ಅಧಿಕಾರಿಗಳು ಸ್ವಚ್ಛ ಭಾರತ ಆಂದೋಲನದ ಪರಿಕಲ್ಪನೆಯಿಂದ ವಿಮುಖವಾಗಿರುವ ಬಗ್ಗೆ ಅಂಗಡಿ ಮಾಲೀಕರು, ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.