ಗುಡ್ಡೆಹೊಸೂರು, ಮಾ. ೫: ಇಲ್ಲಿನ ಸುಣ್ಣದ ಕೆರೆ ಗ್ರಾಮದ ತೋಟಗಾರಿಕೆ ಇಲಾಖೆ ಸೇರಿದ ಪೈಸಾರಿ ಜಾಗದಲ್ಲಿ ಸಾರ್ವಜನಿಕರ ಸ್ಮಶಾನ ಜಾಗಕ್ಕೆ ಕಂದಾಯ ಇಲಾಖಾ ವತಿಯಿಂದ ಸ್ಥಳ ಗುರುತು ಮಾಡುವ ಕಾರ್ಯ ನಡೆಸಲಾಗಿದೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಈ ಜಾಗದಲ್ಲಿ ಸುಮಾರು ೪೦ ವರ್ಷಗಳ ಹಿಂದೆ ತೋಟಗಾರಿಕೆ ಇಲಾಖಾ ವತಿಯಿಂದ ಗಿಡಗಳನ್ನು ಬೆಳೆಸಲಾಗಿದೆ. ಇದು ಜನವಸತಿ ಪ್ರದೇಶವಾಗಿದೆ. ಅದಲ್ಲದೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಚಾಮುಂಡೇಶ್ವರಿ ಮತ್ತು ಗುಳಿಗ ದೇವರ ಬನವಿದೆ. ಇದುವರೆಗೂ ಕಾವೇರಿ ನದಿ ತಟದ ಪ್ರದೇಶದಲ್ಲಿರುವ ಎರಡು ಸ್ಥಳಗಳಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಆದರೆ, ಇದೀಗ ಕಂದಾಯ ಇಲಾಖೆ ತೆಗೆದುಕೊಂಡಿರುವ ಕ್ರಮ ಸರಿಯಲ್ಲ. ಜನರ ವಿರೋಧದ ನಡುವೆಯೂ ಸ್ಮಶಾನ ಮಾಡಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾ.ಪಂ ಮಾಜಿ ಸದಸ್ಯೆ ಕವಿತಾ ರಾಜಪ್ಪ, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕಿ ಕಮಲ, ಕೃಷಿಕರಾದ ರಜೀತ್, ಪಾಪು, ಪುಟ್ಟ ಮಮತಾ ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ,

ಈ ಸಂಬAಧ ನಿವಾಸಿಗಳು ಶಾಸಕ ಅಪ್ಪಚ್ಚು ರಂಜನ್ ಮತ್ತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಸಂಬAಧಪಟ್ಟ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. - ಗಣೇಶ್ ಕುಡೆಕ್ಕಲ್