ಮಡಿಕೇರಿ, ಮಾ. ೫: ಸೋಮವಾರಪೇಟೆ ಪಟ್ಟಣದ ಅಭಿವೃದ್ಧಿಗೆ ಸಂಬAಧಿಸಿದAತೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿ ಗಣೇಶ್ ನೇತೃತ್ವದ ಜನಪ್ರತಿನಿಧಿಗಳ ತಂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿ ಮಾಡಿ ಚರ್ಚಿಸಿ, ಮನವಿ ಸಲ್ಲಿಸಲಾಯಿತು. ತಾಲೂಕು ಕೇಂದ್ರ ಸೋಮವಾರ ಪೇಟೆ ಪಟ್ಟಣ ಸಾಕಷ್ಟು ಅಭಿವೃದ್ದಿ ಸಾಧಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಹಕಾರ ಅಗತ್ಯವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲದೇ ಪರದಾಡುವಂತಾಗಿದೆ ಅಭಿಯಂತ ರರು, ಆರೋಗ್ಯ ನಿರೀಕ್ಷಕರು ಬೇರೆ ಪಂಚಾಯ್ತಿಗಳಿAದ ವಾರಕ್ಕೆ ಎರಡು ದಿನ ಬರುತ್ತಿರುವುದರಿಂದ ಕೆಲಸಗಳು ವಿಳಂಬವಾಗುತ್ತಿವೆ ಆದ್ದರಿಂದ ತಕ್ಷಣವೇ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿ ಕೊಡುವಂತೆ ಮನವಿ ಮಾಡಿದರು.

ಪಟ್ಟಣದಲ್ಲಿ ಸಾಕಷ್ಟು ಬಡವರು, ವಸತಿರಹಿತರು ವಾಸವಾಗಿದ್ದು ಅವರಿಗೆ ನಿವೇಶನ ಹಾಗೂ ಅಗತ್ಯ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ೫ ಎಕರೆ ಜಾಗ ಒದಗಿಸುವಂತೆ, ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆ ಗೇರಿಸುವ ಕಾರ್ಯಪ್ರಗತಿಯಲ್ಲಿದ್ದು ಅದನ್ನು ಮತ್ತಷ್ಟು ಚುರುಕು ಗೊಳಿಸುವಂತೆ ಮನವಿ ಮಾಡಿದರು.

ಪಂಚಾಯ್ತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಮತ್ತು ಮಳೆಹಾನಿ ಪರಿಹಾರ ಒದಗಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿ ದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ತಮ್ಮ ಎಲ್ಲಾ ಮನವಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ಚಂದ್ರು, ಜೀವನ್, ಮಹೇಶ್, ಶುಭಕರ, ಎಸ್.ಮಹೇಶ್, ಸೋಮೇಶ್, ಶರತ್ ಹಾಜರಿದ್ದರು.