ಶ್ರೀಮಂಗಲ, ಮಾ. ೫: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹುಲಿ ದಾಳಿ ಮುಂದು ವರೆದಿದ್ದು ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಬುಧವಾರ ಎರಡು ಹಸುಗಳ ಮೇಲೆ ದಾಳಿ ಮಾಡಿದ ಹಿನ್ನೆಲೆ ಒಂದು ಹಸು ಬಲಿಯಾಗಿತ್ತು ಮತ್ತೊಂದು ಹಸು ಜೀವನ್ಮರಣ ಸ್ಥಿತಿಯಲ್ಲಿರುವುದರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ರಾತ್ರಿ ಬೆಳ್ಳೂರು ಗ್ರಾಮದ ಅಂಚಿನ ಗ್ರಾಮ ಹರಿಹರದಲ್ಲಿ ಹುಲಿ ದಾಳಿಗೆ ರೈತ ಮುಕ್ಕಾಟೀರ ಪೂಮಣಿ (ಬೆನ್ನ) ಅವರ ಹಸು ಬಲಿಯಾಗಿದ್ದು ಇದರಿಂದ ಒಂದೇ ದಿನದಲ್ಲಿ ೩ ಹುಲಿ ದಾಳಿ ಪ್ರಕರಣ ಒಂದೇ ಹುಲಿಯಿಂದ ನಡೆದಿದೆ. ಪೂಮಣಿಯವರ ಕೊಟ್ಟಿಗೆಯಿಂದ ಹಸುವನ್ನು ಕೊಂದು ಕಾಫಿ ತೋಟಕ್ಕೆ ಎಳೆದೊಯ್ಯುತ್ತಿದ್ದ ಸದ್ದಿಗೆ ಸಮೀಪದ ೪೦ ಮೀಟರ್ ದೂರದ ಮನೆಯಿಂದ ಜನರು ಬೊಬ್ಬೆ ಹಾಕಿದ ಹಿನ್ನೆಲೆ ಹಸುವನ್ನು ಬಿಟ್ಟು ಹುಲಿ ಕಾಫಿ ತೋಟದ ಕಡೆ ತೆರಳಿದೆ. ೩ ಹುಲಿ ದಾಳಿ ಪ್ರಕರಣವು ಹುಲಿ ಸೆರೆ ಕಾರ್ಯಾಚರಣೆ ಶಿಬಿರದ ಒಂದು ಕಿ.ಮೀ. ನೇರ ಅಂತರದಲ್ಲಿ ನಡೆದಿದ್ದು, ಹುಲಿ ಸೆರೆ ಕಾರ್ಯಾ ಚರಣೆ ಬಗ್ಗೆ ಮತ್ತೆ ಆಕ್ರೋಶವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ತಾ. ೩ ರ ರಾತ್ರಿ ಹುಲಿ ಶ್ರೀಮಂಗಲ, ಮಾ. ೫: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹುಲಿ ದಾಳಿ ಮುಂದು ವರೆದಿದ್ದು ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಬುಧವಾರ ಎರಡು ಹಸುಗಳ ಮೇಲೆ ದಾಳಿ ಮಾಡಿದ ಹಿನ್ನೆಲೆ ಒಂದು ಹಸು ಬಲಿಯಾಗಿತ್ತು ಮತ್ತೊಂದು ಹಸು ಜೀವನ್ಮರಣ ಸ್ಥಿತಿಯಲ್ಲಿರುವುದರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ರಾತ್ರಿ ಬೆಳ್ಳೂರು ಗ್ರಾಮದ ಅಂಚಿನ ಗ್ರಾಮ ಹರಿಹರದಲ್ಲಿ ಹುಲಿ ದಾಳಿಗೆ ರೈತ ಮುಕ್ಕಾಟೀರ ಪೂಮಣಿ (ಬೆನ್ನ) ಅವರ ಹಸು ಬಲಿಯಾಗಿದ್ದು ಇದರಿಂದ ಒಂದೇ ದಿನದಲ್ಲಿ ೩ ಹುಲಿ ದಾಳಿ ಪ್ರಕರಣ ಒಂದೇ ಹುಲಿಯಿಂದ ನಡೆದಿದೆ. ಪೂಮಣಿಯವರ ಕೊಟ್ಟಿಗೆಯಿಂದ ಹಸುವನ್ನು ಕೊಂದು ಕಾಫಿ ತೋಟಕ್ಕೆ ಎಳೆದೊಯ್ಯುತ್ತಿದ್ದ ಸದ್ದಿಗೆ ಸಮೀಪದ ೪೦ ಮೀಟರ್ ದೂರದ ಮನೆಯಿಂದ ಜನರು ಬೊಬ್ಬೆ ಹಾಕಿದ ಹಿನ್ನೆಲೆ ಹಸುವನ್ನು ಬಿಟ್ಟು ಹುಲಿ ಕಾಫಿ ತೋಟದ ಕಡೆ ತೆರಳಿದೆ. ೩ ಹುಲಿ ದಾಳಿ ಪ್ರಕರಣವು ಹುಲಿ ಸೆರೆ ಕಾರ್ಯಾಚರಣೆ ಶಿಬಿರದ ಒಂದು ಕಿ.ಮೀ. ನೇರ ಅಂತರದಲ್ಲಿ ನಡೆದಿದ್ದು, ಹುಲಿ ಸೆರೆ ಕಾರ್ಯಾ ಚರಣೆ ಬಗ್ಗೆ ಮತ್ತೆ ಆಕ್ರೋಶವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ತಾ. ೩ ರ ರಾತ್ರಿ ಹುಲಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಂದ್ಯAಡ ಉತ್ತಪ್ಪ, ಮಡಿಕೇರಿ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್ ಹಾಗೂ ಶ್ರೀಮಂಗಲ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿ ಬಸವಣ್ಣವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸು ಕಳೆದುಕೊಂಡ ರೈತನಿಗೆ ರೂ. ೨೦ ಸಾವಿರ ಪರಿಹಾರದ ಚೆಕ್ಅನ್ನು ವಿತರಿಸಲು ಮುಂದಾದ ಸಂದರ್ಭ ಹಸುವಿನ ಮೌಲ್ಯ ೫೦ ಸಾವಿರವಿದ್ದು ೨೦ ಸಾವಿರ ಪರಿಹಾರ ಚೆಕ್ ಸ್ವೀಕರಿಸಲು ಸಂತ್ರಸ್ತ ರೈತ ನಿರಾಕರಿಸಿದರು.
ಆದರೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚುವರಿ ಪರಿಹಾರ ನೀಡುವ ಭರವಸೆ ಹಿನ್ನೆಲೆ ಚೆಕ್ನ್ನು ಸ್ವೀಕರಿಸಿದರು. ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.