ಪೆರಾಜೆ, ಮಾ. ೫: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪೆರಾಜೆ ಇದರ ನೂತನ ಉಪಾಧ್ಯಕ್ಷರಾಗಿ ಪೆರುಮುಂಡ ಎಂ. ಅಶೋಕ ಆಯ್ಕೆಯಾಗಿ ದ್ದಾರೆ. ಪೆರಾಜೆ ಪ್ರಾ.ಕೃ.ಪ.ಸ. ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ನೂತನ ಉಪಾಧ್ಯಕ್ಷರಿಗೆ ಶುಭಹಾರೈಸಿದರು. ಸಭೆಯಲ್ಲಿ ಚುನಾವಣಾಧಿಕಾರಿ ಮೋಹನ್ ಪಿ.ಬಿ ಮತ್ತು ಮಾಜಿ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ ಹಾಗೂ ನಿರ್ದೇಶಕರುಗಳಾದ ಪ್ರಸನ್ನ ನೆಕ್ಕಿಲ, ದೀನರಾಜ್ ದೊಡ್ಡಡ್ಕ, ಜಯರಾಮ ಪಿ.ಟಿ., ಶೇಷಪ್ಪ ನಾಯ್ಕ, ಪ್ರಮೀಳಾ ಎನ್. ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ್ ಪೆರಾಜೆ, ದಾಸಪ್ಪ ಮಡಿವಾಳ, ಕಿರಣ್ ಬಂಗಾರಕೋಡಿ, ಸೇರಿದಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.