ಮಡಿಕೇರಿ, ಮಾ. ೫: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ದಶದಿನಗಳ ಮಹಾಶಿವರಾತ್ರಿ ಉತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು, ಉತ್ಸವ ಸಮಿತಿ ಪ್ರಮುಖರು ಈ ಸಂದರ್ಭ ಹಾಜರಿದ್ದರು. ದಶ ದಿನಗಳ ಶಿವರಾತ್ರಿ ಉತ್ಸವದಲ್ಲಿ ಪ್ರತಿ ದಿನ ಸಂಜೆ ೬.೩೦ ರಿಂದ ವಿವಿಧ ಭಜನಾ ತಂಡ ಗಳಿಂದ ಸಂಗೀತಾರ್ಚನೆ ಕಾರ್ಯಕ್ರಮ ನಡೆಯಲಿದೆ.
ತಾ. ೧೧ ರಂದು ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ಮೃತ್ಯುಂಜಯ ಹೋಮ ಸಂಕಲ್ಪ ಪೂಜೆ ಆರಂಭವಾಗಲಿದ್ದು, ಬೆಳಿಗ್ಗೆ ೯ ಗಂಟೆಗೆ ಲೋಕಕಲ್ಯಾಣಕ್ಕಾಗಿ ಈಶ್ವರ ವಿಶೇಷ ಪೂಜೆ, ಮತ್ತು ಗ್ರಾಮದ ಮನೆಗಳಿಂದ ಹೊರಕಾಣಿಗೆ ಸೇವೆಯೂ ಭವ್ಯ ಮೆರವಣಿಗೆಯ ಮೂಲಕ ಸಮರ್ಪಣೆಯಾಗಲಿದೆ. ಸಂಜೆ ೬ ಹಾಜರಿದ್ದರು. ದಶ ದಿನಗಳ ಶಿವರಾತ್ರಿ ಉತ್ಸವದಲ್ಲಿ ಪ್ರತಿ ದಿನ ಸಂಜೆ ೬.೩೦ ರಿಂದ ವಿವಿಧ ಭಜನಾ ತಂಡ ಗಳಿಂದ ಸಂಗೀತಾರ್ಚನೆ ಕಾರ್ಯಕ್ರಮ ನಡೆಯಲಿದೆ.
ತಾ. ೧೧ ರಂದು ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ಮೃತ್ಯುಂಜಯ ಹೋಮ ಸಂಕಲ್ಪ ಪೂಜೆ ಆರಂಭವಾಗಲಿದ್ದು, ಬೆಳಿಗ್ಗೆ ೯ ಗಂಟೆಗೆ ಲೋಕಕಲ್ಯಾಣಕ್ಕಾಗಿ ಈಶ್ವರ ವಿಶೇಷ ಪೂಜೆ, ಮತ್ತು ಗ್ರಾಮದ ಮನೆಗಳಿಂದ ಹೊರಕಾಣಿಗೆ ಸೇವೆಯೂ ಭವ್ಯ ಮೆರವಣಿಗೆಯ ಮೂಲಕ ಸಮರ್ಪಣೆಯಾಗಲಿದೆ. ಸಂಜೆ ೬ ಗಂಟೆಯಿAದ ಶಿವರಾತ್ರಿ ಜಾಗರಣೆ ಅಂಗವಾಗಿ ಭಕ್ತಿ ಪೂರಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ೮ ಗಂಟೆಗೆ ರುದ್ರಾಭಿಷೇಕ, ರಂಗಪೂಜೆ ನಡೆಯಲಿದೆ.
ತಾ. ೧೨ ರಂದು ನೈರ್ಮಲ್ಯ ಪೂಜೆ, ನವಕಲಶ ಪೂಜೆ ಮತ್ತು ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಯಿAದ ಧಾರ್ಮಿಕ ಉಪನ್ಯಾಸ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಕೋವಿಡ್-೧೯ ಹಿನ್ನಲೆ ಎಲ್ಲಾ ಮುಂಜಾಗ್ರತೆ ಕೈಗೊಂಡು ಉತ್ಸವದ ಆಚರಣೆ ನಡೆಸಲಾಗುತ್ತಿದೆ ಎಂದು ಮಹಾಶಿವರಾತ್ರಿ ಉತ್ಸವದ ಉಸ್ತುವಾರಿ ಟಿ.ಕೆ. ರವಿಂದ್ರ ತಿಳಿಸಿದ್ದಾರೆ.