ಊರಿನವರು ಸಾಂಪ್ರದಾಯಿಕ ಉಡುಗೆ ತೊಟ್ಟು ಶ್ರದ್ಧಾಭಕ್ತಿಯಿಂದ ಪುರಾತನ ಜಿಂಕೆ ಕೊಂಬನ್ನು ಹಿಡಿದು ದೇವಾಲಯದ ಸುತ್ತಲೂ ೧೮ ತರಹದ ಆಕರ್ಷಣೀಯ ಹೆಜ್ಜೆ ಹಾಕಿ ಕುಣಿಯುತ್ತಾ ಚೇರಳ ಶ್ರೀ ಭಗವತಿ ದೇವಿಯನ್ನು ವರ್ಷಕ್ಕೊಂದುಬಾರಿ ಕೊಂಡಾಡುತ್ತಾರೆ. ಚೆಟ್ಟಳ್ಳಿ ಪಟ್ಟಣದಿಂದ ಸುಂಟಿಕೊಪ್ಪಕ್ಕೆ ಹೋಗುವ ದಾರಿಯಲ್ಲಿ ಮುಂದೆ ಸಾಗಿದಂತೆ ರಸ್ತೆಯ ಎಡಭಾಗದಲ್ಲಿ ಸುಮಾರು ೧.೫೦ ಕಿ.ಮಿ. ಸಾಗಿದರೆ ಪಶ್ಚಿಮಾಭಿಮುಖವಾಗಿ ನಿಂತ ದೇವಾಲಯವೇ ಚೇರಳ ಶ್ರಿ ಭಗವತಿ ದೇವಾಲಯ. ಇಲ್ಲಿ ಮಾರ್ಚ್ ೫ ರಿಂದ ಮಾರ್ಚ್ ೭ ರವರೆಗೆ ನಡೆಯಲಿರುವ ವಾರ್ಷಿಕ ಉತ್ಸವದ ಸಂಪ್ರದಾಯವು ವಿಶಿಷ್ಟತೆಯಿಂದ ಕೂಡಿದ್ದು, ಜೊತೆಗೆ ೧೮ ತರಹದ ಸಂಪ್ರದಾಯಬದ್ಧವಾದ ಕೊಂಬಾಟ್ ನೃತ್ಯ ಇಲ್ಲಿನ ಮತ್ತೊಂದು ವಿಶೇಷತೆ. ಈ ದೇವಾಲಯಕ್ಕೆ ಸುಮಾರು ೩೫೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಹಿಂದಿನಿAದ ನಡೆದು ಕೊಂಡುಬAದ ದೈವಿಕ ಸಂಪ್ರದಾಯದAತೆ ಈಗಲೂ ಪೂಜಾ ಸಂಪ್ರದಾಯದ ಕೈಂಕರ್ಯ ಗಳನ್ನು, ಹಬ್ಬಹರಿದಿನಗಳನ್ನು ಊರಿನವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ನೆಲೆನಿಂತ ಪ್ರತಿಯೊಂದು ದೇವಾನುದೇವತೆಗಳಿಗೂ ತನ್ನದೇ ಆದ ಇತಿಹಾಸವಿರುವಂತೆ ಇಲ್ಲಿನ ಚೇರಳ ಶ್ರೀ ಭಗವತಿ ದೇವರು ನೆಲೆನಿಂತ ಬಗೆಗಿನ ಇತಿಹಾಸವು ಒಂದು ವಿಶಿಷ್ಟತೆಯಿಂದ ಕೂಡಿದೆ.