ಸಿದ್ದಾಪುರ, ಮಾ. ೫: ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಯಿಂದ ಆಟೋರಿಕ್ಷಾ ಚಾಲಕರಿಗೆ ಸಮಸ್ಯೆ ಯಾಗಿದೆ ಎಂದು ಆರೋಪಿಸಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ - ಮಾಲ್ದಾರೆಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರು ತಮ್ಮ ಆಟೋಗಳನ್ನು ಸ್ಥಗಿತಗೊಳಿಸಿ ೨ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯಲ್ಲಿ ಬೆಳಿಗ್ಗೆ ೧೦.೩೦ ರಿಂದ ೧೨.೩೦ ಗಂಟೆಯವರೆಗೆ ೪೫೦ಕ್ಕೂ ಅಧಿಕ ಆಟೋ ಚಾಲಕರು ಆಟೋ ಚಾಲನೆ ಮಾಡದೇ ನಿಲ್ದಾಣಗಳಲ್ಲೇ ನಿಲ್ಲಿಸಿ ಪ್ರತಿಭಟನೆ ಮಾಡಿದರು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಯನ್ನು ಖಂಡಿಸಿ ಆಟೋ ರಿಕ್ಷಾಗಳನ್ನು ಹಗ್ಗದಲ್ಲಿ ಕಟ್ಟಿ ಎಳೆದುಕೊಂಡು ಹೋಗುವ ರೀತಿಯಲ್ಲಿ ವಿನೂತ£ Àವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ಆಟೋ ಚಾಲಕರ ಪ್ರತಿಭಟನೆ ಯಿಂದಾಗಿ ಸಿದ್ದಾಪುರ ಪಟ್ಟಣದಿಂದ ಸುತ್ತಮುತ್ತಲ ಪ್ರದೇಶಗಳಿಗೆ ಹೋಗುವ ಸಾರ್ವಜನಿಕರು ಆಟೋಗಳು ಇಲ್ಲದೇ ಪರದಾಡಿದ ದೃಶ್ಯಗಳು ಕಂಡು ಬಂದಿತು. ೨ ಗಂಟೆ ಕಾಲ ಪ್ರತಿಭಟನೆ ನಡೆಸಿದ ಆಟೋ ಚಾಲಕರು ನಂತರ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದರು.

ಈ ಸಂದರ್ಭದಲ್ಲಿ ಸಿದ್ದಾಪುರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಮಾತನಾಡಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಿಂದಾಗ್ಗೆ ಏರಿಕೆಯಾಗುತ್ತಿದ್ದು ಆಟೋಚಾಲಕರ ಜೀವನ ದುಸ್ತರವಾಗಿದೆಂದು ವಿಷಾದ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ವಾಹನದ ಬಿಡಿ ಭಾಗಗಳ ಬೆಲೆ ಅಧಿಕವಾಗಿದೆ ಎಂದರು. ಕಳೆದ ೨೦ ವರ್ಷಗಳಿಂದ ಆಟೋದರಗಳನ್ನು ಏರಿಕೆ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ಆಟೋ ಚಾಲಕರಿಗೆ ಸಮಸ್ಯೆ ಎದುರಾಗಿದೆ. ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಬೇಕೆAದು ಮನವಿ ಮಾಡಿದರು.

ಆಟೋ ಚಾಲಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದಾಪುರ ಪಿ.ಡಿ.ಓ ವಿಶ್ವನಾಥ್ ಅವರ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸುರೇಶ್ ನೆಲ್ಲಿಕಲ್ ಹಾಗೂ ರಶಾದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ವೀನಾ ಇನ್ನಿತರರು ಹಾಜರಿದ್ದರು.

ಅಮ್ಮತ್ತಿಯಲ್ಲಿ ಪ್ರತಿಭಟನೆ: ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಆಟೋ ದರವನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ಅಮ್ಮತ್ತಿ ಮಾತನಾಡಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಿಂದಾಗ್ಗೆ ಏರಿಕೆಯಾಗುತ್ತಿದ್ದು ಆಟೋಚಾಲಕರ ಜೀವನ ದುಸ್ತರವಾಗಿದೆಂದು ವಿಷಾದ ವ್ಯಕ್ತಪಡಿಸಿದರು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ವಾಹನದ ಬಿಡಿ ಭಾಗಗಳ ಬೆಲೆ ಅಧಿಕವಾಗಿದೆ ಎಂದರು. ಕಳೆದ ೨೦ ವರ್ಷಗಳಿಂದ ಆಟೋದರಗಳನ್ನು ಏರಿಕೆ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ಆಟೋ ಚಾಲಕರಿಗೆ ಸಮಸ್ಯೆ ಎದುರಾಗಿದೆ. ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಬೇಕೆAದು ಮನವಿ ಮಾಡಿದರು.

ಆಟೋ ಚಾಲಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿದ್ದಾಪುರ ಪಿ.ಡಿ.ಓ ವಿಶ್ವನಾಥ್ ಅವರ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸುರೇಶ್ ನೆಲ್ಲಿಕಲ್ ಹಾಗೂ ರಶಾದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ವೀನಾ ಇನ್ನಿತರರು ಹಾಜರಿದ್ದರು.

ಅಮ್ಮತ್ತಿಯಲ್ಲಿ ಪ್ರತಿಭಟನೆ: ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಆಟೋ ದರವನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ಅಮ್ಮತ್ತಿ ಅಭಿಜಿತ್ ಮಾತನಾಡಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ ದರಗಳನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದರು. ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಆಟೋಚಾಲಕರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಾಗೂ ಬಿಡಿಭಾಗಗಳ ಏರಿಕೆ ಯಿಂದಾಗಿ ಚಾಲಕರ ಕುಟುಂಬಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ನಂತರ ಅಮ್ಮತ್ತಿ ನಾಡ ಕಚೇರಿಗೆ ತೆರಳಿ ಆಟೋ ಚಾಲಕರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಕೆ. ರಂಶೀದ್, ಆಗಸ್ಟೀನ್, ಶಿಜು, ಮಹೇಶ್, ಬಾಲಕೃಷ್ಣ ಹಾಜರಿದ್ದರು.